ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಗ್ರಾಮಸ್ಥರ ಸಭೆ: ಜ.3ರಿಂದ ಜ.8 ಅಷ್ಟಬಂಧ ಬ್ರಹ್ಮಕಲಶಾಭಿಷೇಕ

0

ನಾವೆಲ್ಲರೂ ಒಟ್ಟು ಸೇರಿ ಒಂದಾಗಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸೋಣ: ಪಿ.ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು

ಬೆಲೆಕಟ್ಟಲಾಗದ ಕೆಲಸಗಳು ಕ್ಷೇತ್ರದಲ್ಲಿ ಕರಸೇವೆಯಿಂದ ಆಗಿದೆ: ಸುರೇಶ್ ಕೆ.ಎಸ್. ಮುಕ್ಕುಡ

ಎಲ್ಲರೂ ಒಟ್ಟಾಗಿ ಸೇರಿದರೆ ಇಂತಹ ಮಹತ್ಕಾರ್ಯ ಯಶಸ್ಸಾಗಲು ಸಾಧ್ಯ: ಪ್ರಪುಲ್ಲಚಂದ್ರ ಪಿ.ಜಿ.ಕೋಲ್ಪೆ

ವಿಟ್ಲ: ಬ್ರಹ್ಮಕಲಶಕ್ಕೆ ಇನ್ನು ಉಳಿದಿರುವುದು ಕೆಲವೇ ಗಂಟೆಗಳು ಮಾತ್ರ. ನಾವೆಲ್ಲರೂ ಒಟ್ಟು ಸೇರಿ ಒಂದಾಗಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕು.ಇದೀಗಾಗಲೇ ಜವಾಬ್ದಾರಿಯನ್ನು ಎಲ್ಲರೂ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ‌. ನಾವು ಎಲ್ಲರನ್ನೂ ಒಟ್ಟು ಸೇರಿಸಿ ಅರ್ಪಣಾ ಭಾವದ ಸೇವೆಯನ್ನು ಮಾಡೋಣ .ಎಂದು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಪಿ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತುರವರ ಹೇಳಿದರು.


ಬಂಟ್ವಾಳ ತಾಲೂಕು ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಜ.3ರಿಂದ ಜ.8ರ ವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಜ.1ರಂದು ಕ್ಷೇತ್ರದಲ್ಲಿ ಕರೆದ ಗ್ರಾಮಸ್ತರ ಸಭೆಯಲ್ಲಿ ಅವರು ಮಾತನಾಡಿದರು.

ಇದೀಗಾಗಲೇ ನಿಗದಿಪಡಿಸಿದಂತೆ ಹೊರೆಕಾಣಿಕೆಯನ್ನು ಆಯಾಯಾ ಕೇಂದ್ರಕ್ಕೆ ತಲುಪಿಸಿ ಹೊರೆಕಾಣಿಕೆಯನ್ನು ಯಶಸ್ವಿಗೊಳಿಸೋಣ. ಬ್ರಹ್ಮಕಲಶ 12 ವರ್ಷಕ್ಕೊಮ್ಮೆ ಆಗುವುದು. ಅದು ದೇವರಿಗೆ ಚೈತನ್ಯ ತುಂಬುವ ಕಾರ್ಯಕ್ರಮವಾಗಿದೆ. ಕ್ಷೇತ್ರದ ವ್ಯವಸ್ಥೆಯನ್ನು ಕ್ಷೇತ್ರದ ಮೊಕ್ತೇಸರರಾದ ಸುರೇಶ್ ಕೆ.ಎಸ್.ಮುಕ್ಕುಡರವರ ನೇತೃತ್ವದಲ್ಲಿ ಬಹಳಷ್ಟು ಯಶಸ್ವಿಯಾಗಿ ನಡೆದಿದೆ.

ಬ್ರಹ್ಮಕಲಶೋತ್ಸವದ ದಿನ ಸುಮಾರು 8೦೦೦ಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆ ಇದೆ. ಉಳಿದಂತೆ ಎಲ್ಲಾ ರೀತಿಯಲ್ಲಿ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ವ್ಯವಸ್ಥೆಗಾಗಿ ವಿವಿಧ‌ ವಿಭಾಗಗಳನ್ನು ಮಾಡಲಾಗಿದೆ. ಬ್ರಹ್ಮಕಲಶೋತ್ಸವ ನಡೆಯುವ ಈ ಊರಿನಲ್ಲಿ ವೈಮನಸ್ಸುಗಳನ್ನು ಬಿಟ್ಟು ಎಲ್ಲರೂ ಒಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ. ನಮ್ಮ ಮೇಲೆ ಬಹಳಷ್ಟು ದೊಡ್ಡ ಜವಾಬ್ದಾರಿ ಇದೆ. ವ್ಯವಸ್ಥೆಯನ್ನು ಒಟ್ಟು ಮಾಡಿಕೊಂಡು ಮುಂದುವರಿಯೋಣ. ಒಟ್ಟು ಬ್ರಹ್ಮಕಲಶೋತ್ಸವವನ್ನು ಚಿನ್ನಾಗಿ ಮಾಡೋಣ ಎಂದರು.

ಕ್ಷೇತ್ರದ ಮೊಕ್ತೇಸರರಾದ ಸುರೇಶ್ ಕೆ.ಎಸ್. ಮುಕ್ಕುಡರವರು ಮಾತನಾಡಿ ಬೆಲೆಕಟ್ಟಲಾಗದ ಕೆಲಸಗಳು ಕ್ಷೇತ್ರದಲ್ಲಿ ಕರಸೇವೆಯಿಂದ ಆಗಿದೆ. ಇದಕ್ಕೆಲ್ಲ ಕಾರಣವೇ ನಿಮ್ಮೆಲ್ಲರ ತ್ಯಾಗಪೂರ್ಣ ಸೇವೆ. ಮನೆಯ ಕಾರ್ಯಕ್ರಮ ವೆಂದು ಅರಿತು ಮುಂದುವರೆಯೋಣ. ಬ್ರಹ್ಮಕಲಶದಿಂದ ಗ್ರಾಮ ಮುಂದಿನ ದಿನಗಳಲ್ಲಿ ಇನ್ಮಷ್ಟು ಅಭಿವೃದ್ಧಿ ಹೊಂದಲಿ ಎಂದರು.

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನಕಾರ್ಯದರ್ಶಿ ಪ್ರಪುಲ್ಲ ಚಂದ್ರ ಪಿ.ಜಿ.ಕೋಲ್ಪೆರವರು ಮಾತನಾಡಿ ಓರ್ವ ವ್ಯಕ್ತಿ ಅಥವಾ ಒಂದು ಗುಂಪಿನಿಂದ ಆಗುವ ಕೆಲಸವಲ್ಲ ಎಲ್ಲರೂ ಒಟ್ಟಾಗಿ ಸೇರಿದರೆ ಇಂತಹ ಮಹತ್ಕಾರ್ಯಗಳು ಯಶಸ್ಸಾಗಲು ಸಾಧ್ಯ. ಇವತ್ತು ಸೇರಿರುವ ಉದ್ದೇಶ ಒಂದೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಬಗ್ಗೆ ಸಮಾಲೋಚನೆ ಮಾಡುವುದಾಗಿದೆ. ಎಲ್ಲಾ ವ್ಯವಸ್ಥೆಯಲ್ಲಿ ಎಲ್ಲರೂ ಅವರವರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ ಎಂದು ಹೇಳಿದ ಅವರು ಒಟ್ಟು ವ್ಯವಸ್ಥೆಯ ಬಗ್ಗೆ ತಿಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಈಶ್ವರ ಗೌಡ ನಾಯ್ತೋಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನಕಾರ್ಯದರ್ಶಿ ಪ್ರಪುಲ್ಲ ಚಂದ್ರ ಪಿ.ಜಿ.ಕೋಲ್ಪೆರವರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here