ಜೆಸಿಐ ಆಲಂಕಾರು-ಅಧ್ಯಕ್ಷ: ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಕಾರ್ಯದರ್ಶಿ: ಮಹೇಶ್ ಪಾಟಾಳಿ ಜೇಸಿರೆಟ್ ಅಧ್ಯಕ್ಷೆ: ಜಯಶ್ರೀ ಅಲೆಪ್ಪಾಡಿ, ಜೆಜೆಸಿ ಅಧ್ಯಕ್ಷ: ವಿಖಿತ್ ಜಿ.ಕೆ.

0

ಆಲಂಕಾರು: ಜೇಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೆಸಿಐ ಆಲಂಕಾರು ಇದರ 2023 ನೇ ಸಾಲಿನ ಅಧ್ಯಕ್ಷರಾಗಿ ಸಿವಿಲ್ ಇಂಜಿನಿಯರ್ ಲಕ್ಷ್ಮೀನಾರಾಯಣ ಅಲೆಪ್ಪಾಡಿ, ಕಾರ್ಯದರ್ಶಿಯಾಗಿ ಶಿಕ್ಷಕ ಮಹೇಶ್ ಪಾಟಾಳಿ, ಜೇಸಿರೆಟ್ ಅಧ್ಯಕ್ಷೆಯಾಗಿ ಜಯಶ್ರೀ ಅಲೆಪ್ಪಾಡಿ ಹಾಗೂ ಜೆಜೆಸಿ ಅಧ್ಯಕ್ಷರಾಗಿ ವಿಖಿತ್ ಜಿ.ಕೆ.ಆಯ್ಕೆಗೊಂಡಿದ್ದಾರೆ.


೨೦೨೩ರ ಘಟಕಾಡಳಿತ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅಜಿತ್‌ಕುಮಾರ್ ರೈ, ಉಪಾಧ್ಯಕ್ಷರಾಗಿ ಗುರುರಾಜ್ ರೈ, ಚೇತನ್ ಮೊಗ್ರಾಲ್, ಮಮತ ಅಂಬರಾಜೆ, ಕೇಶವ ರಾಮಕುಂಜ, ವಸಂತಿ ಜಿ.ಕನೆಮಾರು, ಜೊತೆ ಕಾರ್ಯದರ್ಶಿಯಾಗಿ ಬಾಲಕೃಷ್ಣ ಕೇಪುಳು, ಕೋಶಾಧಿಕಾರಿಯಾಗಿ ಪ್ರಶಾಂತ್ ಕುಮಾರ್ ರೈ ಬಿ., ಜೆಜೆಸಿ ಸಂಯೋಜಕರಾಗಿ ಪುರಂದರ, ಜೇಸಿರೆಟ್ ಸಂಯೋಜಕರಾಗಿ ದೇವಕಿ ಹಿರಿಂಜ, ವಿವಿಧ ಕಾರ್ಯಕ್ರಮಗಳ ಸಂಯೋಜಕರಾಗಿ ಪವನ್‌ಕುಮಾರ್, ಚೇತನ್ ಕುಕ್ಕೇರಿ, ನಾರಾಯಣ ನೆಕ್ಕರೆ, ಪೂರ್ಣೇಶ್ ಬಲ್ಯ, ರಾಧಾಕೃಷ್ಣ ಆನ, ಪ್ರೇಮ್ ಕುಮಾರ್, ಹೇಮಂತ ರೈ, ಯೋಗೀಶ್ ಪರಾರಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಪೂವಪ್ಪ ನಾಯ್ಕ್, ಲತನ್ ರೈ, ನವೀನ್ ರೈ, ಮನೋಜ್, ಮಹೇಶ್ ಎಲ್., ಮೋಹನ ಶರವೂರು, ರುದ್ರ ನಾಯ್ಕ್, ರಘುರಾಮ್ ಭಟ್, ನಾಗೇಶ್, ಮಮತ ಉಮೇಶ್, ಜಗದೀಶ್, ಅಜಿತ್‌ಕುಮಾರ್ ಪಾಲೇರಿ, ರಾಘವೇಂದ್ರ ಕೆ.ಎಂ., ಶಿವರಾಮ್, ರವಿರಾಜ್ ಶೆಟ್ಟಿ, ಮನೋಹರ ಕೆ., ರಾಜೇಶ್ ಶೆಟ್ಟಿ, ನಾಗೇಶ್ ಅರ್ಬಿ, ಅಭಿಜಿತ್, ಡಾ.ಅಭಿಷೇಕ್ ಶೆಟ್ಟಿ, ಡಾ.ಆಕಾಶ್, ಲತೇಶ್, ವಿರ್ತೇಸ್, ಅಶ್ವರ್ತ್ ರೈ, ಗೌರವ ಸಲಹೆಗಾರರಾಗಿ ಪ್ರಶಾಂತ್‌ಕುಮಾರ್ ರೈ, ಬಿ.ಎಲ್.ಜನಾರ್ದನ, ಗುರುಪ್ರಸಾದ್ ರೈ, ಪ್ರವೀಣ್ ಆಳ್ವ, ನವೀನ್ ಮಾಯಿಲ್ಗ, ಪ್ರದೀಪ್ ರೈ ಮನವಳಿಕೆ, ಪ್ರದೀಪ್ ಬಾಕಿಲ, ತೋಷಿತ್ ರೈ, ಗುರುಕಿರಣ್ ಶೆಟ್ಟಿ ಬಿ., ಹರಿಶ್ಚಂದ್ರ ಕೆ.,ಹೇಮಲತಾ ಪ್ರದೀಪ್, ಸತೀಶ್ ಜಿ.ಆರ್. ಗಣೇಶ್ ಕಟ್ಟಪುಣಿ ಆಯ್ಕೆಯಾಗಿದ್ದಾರೆ.

ಜ.೪ಕ್ಕೆ ಪದಗ್ರಹಣ:
ನೂತನ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಹಾಗೂ ಘಟಕಾಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಜ.೪ರಂದು ಸಂಜೆ ೬.೩೦ಕ್ಕೆ ಆಲಂಕಾರು ಸಿ.ಎ.ಬ್ಯಾಂಕ್‌ನ ಮಿನಿ ಸಭಾಂಗಣದಲ್ಲಿ ನಡೆಯಲಿದೆ. ಪುತ್ತೂರು ಎವಿಜಿ ಅಸೋಸಿಯೇಟ್ಸ್‌ನ ಇಂಜಿನಿಯರ್ ಎ.ವಿ.ನಾರಾಯಣ, ಜೆಸಿಐ ಭಾರತದ ವಲಯ ೧೫ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ವಲಯ ಉಪಾಧ್ಯಕ್ಷ ಅಜಿತ್‌ಕುಮಾರ್ ರೈ ಹಾಗೂ ಇತರ ಪ್ರಮುಖರು ಭಾಗವಹಿಸಲಿದ್ದಾರೆ. ಪದಗ್ರಹಣ ಸಮಾರಂಭಕ್ಕೆ ಮೊದಲು ಕುಂತೂರಿನಲ್ಲಿ ಜೆಸಿಐ ಮುಂದಾಳತ್ವದಲ್ಲಿ ದಾನಿಗಳ ಸಹಾಯದಿಂದ ನಿರ್ಮಾಣವಾಗಲಿರುವ ನೂತನ ಬಸ್ ತಂಗುದಾಣಕ್ಕೆ ಗುದ್ದಲಿ ಪೂಜೆಯನ್ನು ವಲಯ ೧೫ರ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ನೆರವೇರಿಸಲಿದ್ದಾರೆ ಎಂದು ೨೦೨೨ರ ಅಧ್ಯಕ್ಷ ಅಜಿತ್‌ಕುಮಾರ್ ರೈ ಹಾಗೂ ೨೦೨೩ನೇ ಸಾಲಿನ ನಿಯೋಜಿತ ಅಧ್ಯಕ್ಷ ಲಕ್ಷ್ಮೀನಾರಾಯಣ ಅಲೆಪ್ಪಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here