




ಆಲಂಕಾರು: ಕಡಬ ತಾಲೂಕಿನ ಆಲಂಕಾರಿನಲ್ಲಿ ಕಳೆದ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಭವಾನಿ ಮೆಡಿಕಲ್ಸ್ ಗ್ರಾಹಕರಿಗೆ ಇನ್ನಷ್ಟೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ವಿಶಾಲವಾದ ಮಳಿಗೆಯೊಂದಿಗೆ ನವೀಕೃತಗೊಂಡಿದ್ದು ಇದರ ಶುಭಾರಂಭ ಜ.1ರಂದು ನಡೆಯಿತು.




ನಿವೃತ್ತ ಮುಖ್ಯಶಿಕ್ಷಕ ನಾಗಪ್ಪ ಗೌಡ ಮರುವಂತಿಲ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಶುಭಹಾರೈಸಿದರು. ಶ್ರೀ ಭವಾನಿ ಮೆಡಿಕಲ್ಸ್‌ನ ಮಾಲಕರಾದ ಫಾರ್ಮಸಿಸ್ಟ್ ಸುನಿಲ್ ಕೆ.,ರವರು ಅತಿಥಿಗಳನ್ನು ಬರಮಾಡಿಕೊಂಡು ಮಾತನಾಡಿ, ನಮ್ಮ ಔಷಧ ಮಳಿಗೆಯು ಯಶಸ್ವಿ 12 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಗ್ರಾಹಕರಿಗೆ ಇನ್ನಷ್ಟೂ ಸೇವೆಯನ್ನು ನೀಡುವ ನಿಟ್ಟಿನಲ್ಲಿ ವಿಶಾಲವಾದ ಮಳಿಗೆಯೊಂದಿಗೆ ನವೀಕೃತಗೊಳಿಸಿ ಶುಭಾರಂಭ ಮಾಡಲಾಗಿದೆ. ನಮ್ಮಲ್ಲಿ ಆಲೋಪತಿ, ಸರ್ಜಿಕಲ್ಸ್, ಆಯುರ್ವೇದ, ಸೌಂದರ್ಯವರ್ಧಕ, ಸಾಕುಪ್ರಾಣಿ ಹಾಗೂ ಪಶುವೈದ್ಯಕೀಯ ಔಷಧಗಳು ಲಭ್ಯವಿದೆ. ಗ್ರಾಹಕ ಬಂಧುಗಳು ಮುಂದೆಯೂ ನಮಗೆ ಸಹಕಾರ ನೀಡುವಂತೆ ಹೇಳಿದರು. ಸಿಬ್ಬಂದಿಗಳಾದ ಪ್ರಕಾಶ್, ಶೃತಿ ಹಾಗೂ ಅಭಿಷೇಕ್‌ರವರು ಸಹಕರಿಸಿದರು.














