ಪುತ್ತೂರು: ರಿಕ್ಷಾ ಚಾಲಕರ ಕಲ್ಯಾಣ ಮಂಡಳಿ, ತಾಲೂಕು ಕೇಂದ್ರಗಳಲ್ಲಿ ಕಾರ್ಮಿಕ ಭವನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ವತಿಯಿಂದ ಸಹಾಯಕ ಕಮೀಷನರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿರುವಂತಹ ಎಲ್ಲಾ ಅಟೋರಿಕ್ಷಾ ಚಾಲಕರಿಗೆ ಅನಕೂಲವಾಗುವಂತೆ ರಿಕ್ಷಾ ಚಾಲಕರ ಕಲ್ಯಾಣ ಮಂಡಳಿ, ಎಲ್ಲಾ ತಾಲೂಕು ಕೇಂದ್ರಗಳು ಕಾರ್ಮಿಕ ಭವನ ನಿರ್ಮಾಣ ಮಾಡಬೇಕು, ರಿಕ್ಷಾ ಚಾಲಕರಿಗೆ ಇಎಸ್‌ಐ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು, ಚಾಲಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿ ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಭಾರತೀಯ ಮಜ್ದೂರ್ ಸಂಘ ಕರ್ನಾಟಕ ಪ್ರದೇಶವು ಬೇಡಿಕೆಯ ದಿನವನ್ನಾಗಿ ಆಚರಣೆ ಮಾಡಲು ತೀರ್ಮಾನಿಸಿದಂತೆ ರಾಜ್ಯದ ಎಲ್ಲಾ ಬಿ ಎಮ್ ಎಸ್ ಸಂಘಟನೆ ತಾಲೂಕು ವ್ಯಾಪ್ತಿಯಲ್ಲಿ ಮನವಿ ಸಲ್ಲಿಸಿದಂತೆ ಪುತ್ತೂರಿನಲ್ಲೂ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ರಾಜೇಶ್. ಕೆ ,ಕಾರ್ಯದರ್ಶಿ ದಿನೇಶ್ ಗೌಡ ,ಜನಾರ್ಧನ ಪೂಜಾರಿ, ದೇವಪ್ಪಗೌಡ , ಹುಸ್ಸೈನ್ , ಶಿವಪ್ರಸಾದ್ ,ರಾಘವೇಂದ್ರ ರೈ, ಬಿ.ಕೆ ಸುಂದರ್ ನಾಯ್ಕ್ ,ಸುರೇಶ್ ಸುಧಾಕರ್ ನಾಯಕ್ ಉಪಸ್ಥಿತರಿದ್ದರು.