ರೋಟರಿ ಕ್ಲಬ್‌ ಪುತ್ತೂರು ಪೂರ್ವದಿಂದ ಸಹಾಯ ಹಸ್ತ

0

ಪುತ್ತೂರು : ರೋಟರಿ ಕ್ಲಬ್‌ ಪುತ್ತೂರು ಪೂರ್ವದ ಚಾರಿಟೇಬಲ್‌ ಟ್ರಸ್ಟ್‌  ಮೂಲಕ ಸಂಗ್ರಹಿಸಲಾದ ಸುಮಾರು 45,970 ರೂಪಾಯಿಯನ್ನು ಕ್ಲಬ್ಬಿನ ಸಪ್ತಾಹಿಕ ಸಭೆಯಲ್ಲಿ ಕೆಮ್ಮಾಯಿಯ ಪುನೀತ್‌ ಮನೆಯವರಿಗೆ ಹಸ್ತಾಂತರಿಸಲಾಯಿತು.

ಇತ್ತೀಚೆಗೆ ಕೆಮ್ಮಾಯಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ 14 ವರ್ಷದ ವಿದ್ಯಾರ್ಥಿ ಪುನೀತ್‌ ತಲೆಗೆ ಮತ್ತು ಕಾಲಿಗೆ ಗಾಯವಾಗಿತ್ತು. ಕಡು ಬಡತನದಲ್ಲಿದ್ದ ಕುಟುಂಬಕ್ಕೆ ರೋಟರಿ ಕ್ಲಬ್‌ ಪುತ್ತೂರು ಪೂರ್ವ ಸಹಾಯ ಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದೆ.

LEAVE A REPLY

Please enter your comment!
Please enter your name here