ಮುಂಡೂರು ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನದ ಬ್ರಹ್ಮಕಲಶೋತ್ಸವ, ಧಾರ್ಮಿಕ ಸಭೆ

0

ಪುತ್ತೂರು: ಊರಿನ ಬೆಳವಣಿಗೆ ಧಾರ್ಮಿಕ ಕೇಂದ್ರ ಮುಖಾಂತರ ನಡೆಯುತ್ತದೆ.ದೇವಸ್ಥಾನ, ದೈವಸ್ಥಾನಗಳ ಅಭಿವೃದ್ಧಿಯಾದಾಗ ಆ ಊರಿನ ಅಭಿವೃದ್ಧಿಯಾದಂತೆ.ಆಗ ಊರಿನ ಜನರ ಮನಸ್ಸಿನಲ್ಲಿ ಸಂತೃಪ್ತಿ ಉಂಟಾಗುತ್ತದೆ.ಅದನ್ನು ಉದಯಗಿರಿಯ ಜನತೆಯಲ್ಲಿ ಕಾಣಲಾಗುತ್ತಿದೆ ಎಂದು ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳೀಧರ ಭಟ್ ಬಂಗಾರಡ್ಕ ಹೇಳಿದರು.


ಮುಂಡೂರು ಗ್ರಾಮದ ಅಜಲಾಡಿ ಉದಯಗಿರಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಜ.೨ರಂದು ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ದಾರ ಮಾಡುವುದು ಪೂರ್ವಜನ್ಮದ ಪುಣ್ಯದ ಫಲವಾಗಿದೆ.ಇಲ್ಲಿನ ದೈವಸ್ಥಾನದ ನಿರ್ಮಾಣದಲ್ಲಿ ಈ ಊರಿನ ಯುವಕರು ಉತ್ತಮ ರೀತಿಯಲ್ಲಿ ಹಗಲಿರುಳು ದುಡಿದಿದ್ದಾರೆ.ಇದರ ಫಲವಾಗಿ ಕೇವಲ ೬೦ ದಿನದಲ್ಲಿ ದೈವಸ್ಥಾನ ನಿರ್ಮಾಣವಾಗಿದೆ.ಊರಿನ ಜನರ ಸಮರ್ಪಣಾ ಭಾವದಿಂದ ಭವ್ಯ ಕ್ಷೇತ್ರ ನಿರ್ಮಾಣವಾಗಿ ಸುಂದರವಾಗಿ ಶೋಭಿಸುವಂತಾಗಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಉದಯಗಿರಿ ವಿಷ್ಣುಮೂರ್ತಿ ದೈವದ ಕಾರಣಿಕ ಶಕ್ತಿ ಅಗಾಧವಾದುದು.ಈ ಶಕ್ತಿಯಿಂದಾಗಿ ಉದಯಗಿರಿಯಲ್ಲಿ ಎಲ್ಲಾ ಸವಾಲುಗಳನ್ನು ಎದುರಿಸಿ ಕೇವಲ ೬೦ ದಿನಗಳಲ್ಲಿ ಜೀರ್ಣೋದ್ಧಾರ ಸಾಧ್ಯವಾಗಿದೆ.ದೈವಸ್ಥಾನದ ಬಗ್ಗೆ ಮತಾಂಧರ ಮೂಲಕ ಒಡಕು ತರುವ ಪ್ರಯತ್ನ ಮಾಡಿದ್ದರೂ ಇಲ್ಲಿ ಸತ್ಯ, ಪ್ರಾಮಾಣಿಕತೆಗೆ ಗೆಲುವು ದೊರೆತಿದೆ.ಯಾರು ಪ್ರಾಮಾಣಿಕರು ಎಂಬುದನ್ನು ದೈವವೇ ತೋರಿಸಿಕೊಟ್ಟಿದೆ.ದೈವದ ಸಂಪೂರ್ಣ ಅನುಗ್ರಹದಿಂದ ಎಲ್ಲವೂ ಸಾಧ್ಯವಾಗಿದೆ ಎಂದರಲ್ಲದೆ, ಮುಂದೆಯೂ ಅಪಸ್ವರಗಳಿಗೆ ಕಿವಿಕೊಡದೇ ಕ್ಷೇತ್ರದ ಎಲ್ಲಾ ಕಾರ್ಯಗಳಲ್ಲಿಯೂ ಪ್ರತಿಯೊಬ್ಬರೂ ಸಹಕರಿಸುವಂತೆ ಮನವಿ ಮಾಡಿದರು.

ತಹಶಿಲ್ದಾರ್ ನಿಸರ್ಗಪ್ರಿಯ ಮಾತನಾಡಿ, ದೈವಸ್ಥಾನವು ಅದ್ಭುತ ರೀತಿಯಲ್ಲಿ ನಿರ್ಮಾಣಗೊಂಡಿದೆ.ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗಿಯಾದವರಿಗೆ ಅಭಿನಂದನೆಗಳು.ಈ ಶ್ರದ್ಧಾ ಕೇಂದ್ರದ ಮೂಲಕ ಶಾಂತಿ, ಸಮನ್ವಯತೆಯಿಂದ ಬಾಳುವಂತೆ ಅನುಗ್ರಹಿಸಲಿ ಎಂದರು.

ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ ಮಾತನಾಡಿ, ದೈವದ ಕೃಪೆಯಿಂದ ಅಲ್ಪ ಅವಧಿಯಲ್ಲಿ ಕ್ಷೇತ್ರ ಪುನರ್ ನಿರ್ಮಾಣವಾಗಿದೆ.ದೇವರ ಕೃಪೆ ಎಲ್ಲರ ಮೇಲಿದೆ.ಅಪಾರ ಭಕ್ತಿ ಶ್ರದ್ದೆಯಿಂದ ಮಾಡುವ ಕಾರ್ಯಗಳಿಗೆ ಭಕ್ತರಿಗೆ ಅನುಗ್ರಹ ದೊರೆಯಲಿದೆ ಎಂದರು.

ಪ್ರಗತಿಪರ ಕೃಷಿಕ ವೆಂಕಟೇಶ ಅಯ್ಯಂಗಾರ್ ಮಾತನಾಡಿ, ವಿಷ್ಣುಮೂರ್ತಿ ದೈವದ ಕ್ಷೇತ್ರ ಬಹಳಷ್ಟು ಸುಂದರವಾಗಿ ನಿರ್ಮಾಣಗೊಂಡಿದೆ.ದೈವದ ಒತ್ತೆಕೋಲ ನೋಡುವ ಕುತೂಹಲವಿತ್ತು, ಒತ್ತೆಕೋಲ ನೋಡುವ ಅವಕಾಶ ದೊರೆತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಹರಿಕೃಷ್ಣ ಪಾಣಾಜೆ ಮಾತನಾಡಿ, ಅಲ್ಪ ಸಮಯದಲ್ಲಿ ನಿರ್ಮಾಣಗೊಂಡ ದೈವಸ್ಥಾನ ಜನರ ಶಕ್ತಿ ಕೇಂದ್ರ.ಅತ್ಯಲ್ಪ ಅವಧಿಯಲ್ಲಿ ಜೀರ್ಣೋದ್ಧಾರಗೊಂಡಿರುವ ದೈವಸ್ಥಾನವು ಮುಂದಿನ ದಿನಗಳಲ್ಲಿ ಈ ಭಾಗದ ಶಕ್ತಿ ಕೇಂದ್ರವಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ.ಮುಂದಿನ ದಿನಗಳಲ್ಲಿ ಪ್ರತಿವರ್ಷ ಜನವರಿ ೧ರಂದು ಒತ್ತೆಕೋಲ ನಡೆಯಲಿದೆ.ವಿಷ್ಣು ಸಹಸ್ರನಾಮ ಮಾಡುವುದರಿಂದ ಕಾಯಿಲೆಯಿಂದ ಹೊರ ಬರಲು ಸಾಧ್ಯವಿದ್ದು ವಿಷ್ಣುಮೂರ್ತಿ ದೈವಕ್ಕೆ ಅದ್ಭುತ ಶಕ್ತಿಯಿದೆ. ಮಹಾಭಾರತದಲ್ಲಿ ಒಬ್ಬ ಕೃಷ್ಣ, ಒಬ್ಬ ಅರ್ಜುನನಿಗೆ ಶಕ್ತಿ ನೀಡಿ ಕೆಲಸ ಮಾಡಿದಂತೆ ಇಲ್ಲಿ ಒಬ್ಬ ವಿಷ್ಣು ಇದ್ದು ಹಲವು ಮಂದಿ ಕರಸೇವಕರಾಗಿ ಕೆಲಸ ಮಾಡಿದ್ದಾರೆ.ಇಲ್ಲಿ ವಿಷ್ಣುವಿನ ಅವತಾರದ ಶಕ್ತಿ ಅವಿರ್ಭೂತವಾಗಿದೆ ಎಂದರು.

ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕವಾಗಿ ಮಾತನಾಡಿ, ಉದಯಗಿರಿ ವಿಷ್ಣುಮೂರ್ತಿ ದೈವಸ್ಥಾನವನ್ನು ಕೆಮ್ಮಿಂಜೆ, ಮುಂಡೂರು, ಕುರಿಯ, ನರಿಮೊಗರು ಗ್ರಾಮಗಳ ಪವಿತ್ರ ತಾಣವನ್ನಾಗಿಸಲು ಪ್ರಯತ್ನಿಸಲಾಗಿದೆ.ನಮ್ಮ ಕನಸನ್ನು ಚಿವುಟಿ ಹಾಕುವ ಯತ್ನವೂ ನಡೆದಿತ್ತು.ಸಾಕಷ್ಟು ವಿರೋಧ, ಅವಮಾನ, ಅಪಮಾನಗಳ ಸವಾಲುಗಳನ್ನು ಎದುರಿಸಿ, ದೇವ ದುರ್ಲಭ ಕಾರ್ಯಕರ್ತರ ಶ್ರಮದ ಫಲವಾಗಿ ಭವ್ಯ ಸಾನಿಧ್ಯ ನಿರ್ಮಾಣವಾಗಿದೆ.ಕ್ಷೇತ್ರದಲ್ಲಿ ಶುದ್ಧಾಚಾರ ಪಾಲಿಸುವಂತೆ ದೈವಜ್ಞರು ಸೂಚಿಸಿದಂತೆ ಬದಲಿ ರಸ್ತೆ ನಿರ್ಮಿಸಲಾಗಿದೆ.ಆದರೂ ಜಿಹಾದಿ ಮನೋಭಾವದಲ್ಲಿ ದೈವಸ್ಥಾನ, ಬ್ರಹ್ಮಕಲಶ ನಿಲ್ಲಿಸುವ ಯತ್ನವೂ ನಡೆದಿತ್ತು.ಇದನ್ನು ಹಿಂದು ಸಮಾಜ ಸವಾಲಾಗಿ ಸ್ವೀಕರಿಸಿತ್ತು.ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ದರು ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದು ಹಿಂದೂ ಸಮಾಜದ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಮುಂಡೂರು ಗ್ರಾ.ಪಂ ಅಧ್ಯಕ್ಷೆ ಪುಷ್ಪಾಪುರಂದರ ಗೌಡ, ದೈವಸ್ಥಾನದ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಭಾಸ್ಕರ ಆಚಾರ್ ಹಿಂದಾರು,ಕಾರ್ಯದರ್ಶಿ ಸದಾಶಿವ ಶೆಟ್ಟಿ ಅಜಲಾಡಿಪಟ್ಟೆ, ಕೋಶಾಧಿಕಾರಿ ಹುಕ್ರ ಮಾಸ್ಟರ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ್ ಸುವರ್ಣ ಬೊಲ್ಲಗುಡ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ, ಗೌರವಾರ್ಪಣೆ: ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲರವರನ್ನು ಊರಿನ ಜನತೆಯ ಪರವಾಗಿ ಸನ್ಮಾನಿಸಲಾಯಿತು.ಪ್ರವೀಣ್ ಕುಮಾರ್ ಮುಲಾರ್‌ರವರು ಪೆನ್ಸಿಲ್ ಆರ್ಟ್‌ನಲ್ಲಿ ಬಿಡಿಸಿದ ಅರುಣ್ ಕುಮಾರ್ ಪುತ್ತಿಲರವರ ಚಿತ್ರವನ್ನು ಅವರಿಗೆ ಅರ್ಪಿಸಲಾಯಿತು.ದೈವಸ್ಥಾನದ ಛಾವಣಿಗೆ ತಾಮ್ರದ ಹೊದಿಕೆಗೆ ಸುಮಾರು ರೂ.೬ ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ದೇಣಿಗೆ ನೀಡಿದ ಗಂಗಯ್ಯ ಶೆಟ್ಟಿ ಪಟ್ಟೆ ಕುಟುಂಬದವರು, ವೆಂಕಟೇಶ ಅಯ್ಯಂಗಾರ್, ರಾಜೇಶ್ವರಿ ವೆಂಕಟೇಶ ಅಯ್ಯಂಗಾರ್ ದಂಪತಿ, ರತ್ನಾವತಿ ನಾರಾಯಣ ಶೆಟ್ಟಿ ಪಂಜಳ, ತ್ರಿವೇಣಿ ಕರುಣಾಕರ ಪೆರ್ವೋಡಿ, ವಿಷ್ಣುಮೂರ್ತಿ ಭಜನಾ ಮಂಡಳಿ, ರಘುನಾಥ ಶೆಟ್ಟಿ ಪೊನೋನಿ, ದೈವದ ಹಿರಿಯ ಪರಿಚಾರಕ ಚಂದು ಮಣಿಯಾಣಿ, ಸೇಸಪ್ಪ ಶೆಟ್ಟಿ ಪೊನೋನಿಯವರನ್ನು ಸನ್ಮಾನಿಸಲಾಯಿತು.ದೇಣಿಗೆ ನೀಡಿ ಸಹಕರಿಸಿದ ವಸಂತ ರೈ ಶಿಬರ, ಇಳಯರಾಜ ದಂಡ್ಯನಕುಕ್ಕು, ಪ್ರಶಾಂತ್ ಆಚಾರ್ಯ ಮುಂಡೂರು, ದೇವದಾಸ್ ಕುರಿಯ, ಪುರುಷೋತ್ತಮ ಬಂಗೇರ, ಬಾಲಕೃಷ್ಣ ಶೆಟ್ಟಿ ಪಂಜಳ, ಬಾಲಚಂದ್ರ ಕಡ್ಯ, ಬಾಲಕೃಷ್ಣ ಹಿಂದಾರು, ಚಂದ್ರಶೇಖರ ಶಾಂತಿಗೋಡು, ಸತೀಶ್ ರೈ ಪೊನೋನಿ, ರಾಮ ದಂಡ್ಯನಕುಕ್ಕು, ಜಯಪ್ರಸಾದ್ ಮುಂಡೂರು,ಪರಮೇಶ್ವರ ನಾಯ್ಕ, ಚಂದ್ರಶೇಖರ ಶೆಟ್ಟಿ ಪಂಜಳ ಹಾಗೂ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಸಹಕರಿಸಿದ ವಿವಿಧ ಸಂಘ, ಸಂಸ್ಥೆಗಳನ್ನು ಗೌರವಿಸಲಾಯಿತು.

ಸಿಂಧುರಶ್ಮೀ ಶೆಟ್ಟಿ, ಭಾಗ್ಯಶ್ರೀ ಶೆಟ್ಟಿ, ವಿಂಧ್ಯಾಶ್ರೀ ಶೆಟ್ಟಿ ಪ್ರಾರ್ಥಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಅನಿಲ್ ಕುಮಾರ್ ಕಣ್ಣಾರ್ನೂಜಿ ಸ್ವಾಗತಿಸಿದರು.ಉದಯ ಕುಮಾರ್ ರೈ ಎಸ್ ಸಂಪ್ಯ ಕಾರ್ಯಕ್ರಮ ನಿರೂಪಿಸಿ, ನವೀನ್ ರೈ ಪಂಜಳ ವಂದಿಸಿದರು.ಪ್ರವೀಣ್ ಶೆಟ್ಟಿ ಪಂಜಳ, ಬಾಲಕೃಷ್ಣ ಪೂಜಾರಿ ಹಿಂದಾರು, ವಿನೋದ್ ಶೆಟ್ಟಿ ಪಂಜಳ, ಭರತ್ ಉದಯಗಿರಿ, ಪ್ರಸಾದ್ ಕುಮಾರ್ ಎ.ಪಿ. ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು.

ಜ.೧೪:ಸಾರ್ವಜನಿಕ ಲೆಕ್ಕಪತ್ರ ಮಂಡನೆ
ಸಂದೇಹಗಳಿದ್ದಲ್ಲಿ ಇತ್ಯರ್ಥಕ್ಕೆ ವೇದಿಕೆ
ದೈವಸ್ಥಾನದ ನಿರ್ಮಾಣಕ್ಕೆ ಸಾಕಷ್ಟು ಮಂದಿ ದಾನಿಗಳು ಸಹಕಾರ ನೀಡಿದ್ದು ಸುಂದರ ದೈವಸ್ಥಾನ ನಿರ್ಮಾಣವಾಗಿದೆ.ಆದರೂ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯ ತೇಜೋವಧೆಗಳು, ಅವಮಾನಗಳನ್ನು ನೋಡಿzವೆ.ಬ್ರಹ್ಮಕಲಶೋತ್ಸವ ಮುಗಿದು ಒಂದು ವಾರದಲ್ಲಿ ಸಮಗ್ರ ಲೆಕ್ಕಪತ್ರವನ್ನು ಪಾರದರ್ಶಕವಾಗಿ ಸಮಾಜಕ್ಕೆ ಮಂಡಿಸಲಾಗುವುದು.ಇದರ ಬಗ್ಗೆ ಯಾರಿಗಾದರೂ ನೋವು ಸಂದೇಹಗಳಿದ್ದರೆ ಮಕರ ಸಂಕ್ರಮಣ ದಿನ ಲೆಕ್ಕಪತ್ರ ಮಂಡಿಸಲಾಗುತ್ತಿದ್ದು ಇತ್ಯರ್ಥಪಡಿಸಲು ವೇದಿಕೆ ಕಲ್ಪಿಸಲಾಗುವುದು.ಸಾಮಾಜಿಕ ಜಾಲತಾಣಗಳಲ್ಲಿ ಏನೇನೋ ಬರೆಯುವವರಿಗೂ ಸಾರ್ವಜನಿಕ ಲೆಕ್ಕಪತ್ರ ಮಂಡನೆ ಕಾರ್ಯಕ್ರಮಕ್ಕೆ ಆಮಂತ್ರಣ ನೀಡುತ್ತಿzನೆ.
ಅರುಣ್ ಕುಮಾರ್ ಪುತ್ತಿಲ,
ಅಧ್ಯಕ್ಷರು ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ

LEAVE A REPLY

Please enter your comment!
Please enter your name here