ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋ ಶಾಲೆಯಲ್ಲಿ ಗೋಗ್ರಾಸ ನೀಡಿ ಹುಟ್ಟು ಹಬ್ಬ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾಮಧೇನು ಗೋ ಶಾಲೆಯಲ್ಲಿ ಕಡಬ ತಾಲೂಕು ಕುಂಬಾರು ಗ್ರಾಮದ ನಿವಾಸಿ ಗಳಾದ ಚೇತನ್ ಕುಮಾರ್ ಅಪೂರ್ವ ದಂಪತಿಗಳ ಮಗ ಶಿವಾಂಕ್ ನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದರು.


ಕಾಮಧೇನು ಗೋ ಶಾಲೆಯಲಿ ಗೋವುಗಳ ಮುಂದೆ ದೀಪ ಪ್ರಜ್ವಲಿಸಿ, ಗೋಗ್ರಾಸ ನೀಡಿ ಹುಟ್ಟಿದ ಹಬ್ಬ ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯ ಐತ್ತಪ್ಪ ನಾಯಕ್, ಸುದೇಶ್, ಹರೀಶ್, ಪದ್ಮನಾಭ, ಯಶವಂತ ಮತ್ತು ಮಗುವಿನ ಕುಟುಂಬಸ್ಥರು ಬಂಧು ಬಳಗದವರು ಹಾಜರಿದ್ದರು.

ಸನಾತನ ಹಿಂದೂ ಸಂಸ್ಕೃತಿಯ ಪುನರುತ್ಥಾನದ ಸಂಕೇತವಾಗಿ ಈ ಕಾರ್ಯಕ್ರಮವು ವಿಶಿಷ್ಟವಾಗಿ ಮೂಡಿಬಂದಿದೆ. ತಮ್ಮ ಹುಟ್ಟು ಹಬ್ಬವನ್ನು ಗೋ ಶಾಲೆಯಲ್ಲಿ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಮದುವೆಯ ಶುಭ ದಿನವನ್ನು ಈ ರೀತಿ ಆಚರಿಸುವಂತಾಗಲಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.