ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿಗಳನ್ನು ಆನ್‌ಲೈನ್ ತಂತ್ರಾಂಶಗಳಲ್ಲಿ ದಾಖಲಿಕರಣ : ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಸಮೀಕ್ಷೆದಾರರ ಭೇಟಿ ಕಾರ್ಯಕ್ರಮ

0

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗಳನ್ನು ಆನ್‌ಲೈನ್ ತಂತ್ರಾಂಶಗಳಲ್ಲಿ ಕಾಲೋಚಿತಗೊಳಿಸುವ ಬಗ್ಗೆ ಆಸ್ತಿ ಮಾಲೀಕರಿಂದ ದಾಖಲೆಗಳನ್ನು ಪರಿಶೀಲಿಸಿ ನಿಗಧಿತ ನಮೂನೆಗಳಲ್ಲಿ ಮಾಹಿತಿಗಳನ್ನು ಭರ್ತಿ ಮಾಡುವ ಸಮೀಕ್ಷೆ ಕಾರ್ಯಕ್ರಮ ಈಗಾಗಲೇ ವಾರ್ಡ್‌ಗಳಲ್ಲಿ ಆರಂಂಭಗೊಂಡಿದ್ದು, ಜ.5 ರಂದು ಕೊಂಬೆಟ್ಟು ಅಟಲ್ ಉದ್ಯಾನದಲ್ಲಿ ಅಧಿಕಾರಿಗಳು ವಾರ್ಡ್‌ಗಳ ಆಸ್ತಿಗಳ ದಾಖಲೆ ಅಪ್‌ಲೋಡ್ ಮಾಡುವ ಕಾರ್ಯಕ್ರಮ ನಡೆಸಿದರು.

ನಗರಸಭೆ ಅಧಿಕಾರಿಗಳು ವಾರ್ಡ್‌ಗಳಿಗೆ ಭೇಟಿ ನೀಡಿ ಅಲ್ಲಿನ ಕೇಂದ್ರ ಸ್ಥಾನದಲ್ಲಿ ಕೂತು ಅಲ್ಲಿಂದ ನಗರಸಭೆಯಿಂದ ನಿಯೋಜನೆ ಮಾಡಿರುವ ಸಮೀಕ್ಷೆದಾರರು ವಾರ್ಡ್‌ನಲ್ಲಿರುವ ವಾಸದ ಕಟ್ಟಡಗಳಿಗೆ, ವಾಣಿಜ್ಯ ಕಟ್ಟಡಗಳಿಗೆ ಭೇಟಿ ನೀಡಿ ಅಲ್ಲಿ ವಾರಿಸುದಾರರ ಆಸ್ತಿಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ಮತ್ತು ಮಾಹಿತಿಯನ್ನು ಪಡೆಯಲಾಯಿತು.

ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ತಮ್ಮ ವಾರ್ಡ್‌ನ ಆಸ್ತಿಗಳ ವಿವರಣೆ ನೀಡುವಲ್ಲಿ ಸಹಕರಿಸಿದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರ ನೇತೃತ್ವದಲ್ಲಿ ಆಸ್ತಿಗಳ ಆನ್‌ಲೈನ್ ತಂತ್ರಾಂಶಗಳ ದಾಖಲಿಕರಣ ನಡೆಯಿತು. ನಗರಸಭೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ತಂತ್ರಾಂಶ ದಾಖಲೀಕರಣ ಸಂದರ್ಭದಲ್ಲಿ ದಾಖಲೆ ಸಲ್ಲಿಸಲು ಆಗಮಿಸಿದ ಸ್ಥಳೀಯರಾದ ರಾಘವೇಂದ್ರ ಐತಾಳ್ ಅವರು ನಗರಸಭೆಯ ಈ ಕಾರ್ಯವೈಖರಿಯಿಂದ ನಮ್ಮಂತಹ ಹಿರಿಯ ನಾಗಕರಿಗೆ ತುಂಬಾ ಪ್ರಯೋಜನ ಆಗಿದೆ ಎಂದರು.

ಈಗಾಗಲೇ ಮನೆ ಮನೆ ಭೇಟಿ ಆರಂಭಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ಕ್ಯಾಂಪ್‌ಗಳನ್ನು ಮಾಡುತ್ತಿದ್ದೇವೆ. ಇಲ್ಲಿ ಆ ಮನೆಯವರು ಬಂದು ಆಸ್ತಿಗಳನ್ನು ದಾಖಲಿಕರಣ ಮಾಡಬಹುದು. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳನ್ನು ಆನ್‌ಲೈನ್ ತಂತ್ರಾಂಶದಲ್ಲಿ ದಾಖಲಿಸಲು ಜನರು ಸಹಕಾರ ನೀಡಬೇಕು. ಹಾಗೆ ಒಟ್ಟು 14 ದಾಖಲೆ ದಾಖಲೆಗಳು ಇಲ್ಲಿ ಸಲ್ಲಿಕೆ ಮಾಡಬೇಕು. ಇದರಲ್ಲಿ ಕೆಲವರು ಈಗಾಗಲೇ ಖಾತೆ ಮಾಡಿಸಿದ್ದಾರೆ. ಹಾಗೆ ಖಾತೆ ಮಾಡಿಸಿಕೊಂಡ ದಾಖಲೆಗಳಲ್ಲಿ ಜಿಪಿಎಸ್ ಕೋಡ್‌ವೊಂದನ್ನು ಇರಿಸಿ ಖಾತೆ ಪ್ರತಿ ಕೊಟ್ಟರೆ ನಾವು ಅದನ್ನು ಆನ್‌ಲೈನ್‌ನಲ್ಲಿ ಸೇರಿಸಿಕೊಳ್ಳುತ್ತೇವೆ. ಖಾತೆಗೆ ಆಗದವರು 14ದಾಖಲೆ ಕೊಡಬೇಕು. ಮುಂದಿನ ದಿನ ಇದು ಜನರಿಗೆ ತುಂಬಾ ಅನುಕೂಲ ಆಗುತ್ತದೆ. ಇದರಿಂದ ಖಾತೆ ಆಗದವರಿಗೂ ಮುಂದೆ ತಕ್ಷಣ ಖಾತೆ ಕೊಡುವ ಕೆಲಸ ಆಗಬಹುದು.
ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ ಪುತ್ತೂರು

ನಗರಸಭೆಯ ಎಲ್ಲಾ 31 ವಾರ್ಡ್‌ಗಳಲ್ಲಿ ಆಸ್ತಿಗಳನ್ನು ಇ ತಂತ್ರಾಂಶಕ್ಕೆ ಸೇರಿಸುವ ನಿಟ್ಟಿನಲ್ಲಿ ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ನೇತೃತ್ವದಲ್ಲಿ ದಾಖಲಿಕರಣ ನಡೆಯುತ್ತಿದೆ. ಕಚೇರಿಗೆ ಹೋಗಿ ಸಮಯ ವ್ಯರ್ಥ ಮಾಡುವ ಬದಲು ಮನೆ ಬಾಗಿಲಿಗೆ ನಗರಸಭೆ ಅಧಿಕಾರಿಗಳು ಬಂದಾಗ ಸರಿಯಾದ ದಾಖಲೆ ನೀಡಿ ಸಹಕರಿಸುವಂತೆ ವಿನಂತಿ
ಪಿ.ಜಿ.ಜಗನ್ನಿವಾಸ ರಾವ್, ಸದಸ್ಯರು ನಗರಸಭೆ ಪುತ್ತೂರು

LEAVE A REPLY

Please enter your comment!
Please enter your name here