ಸವಣೂರಿನ ಅಭಿವೃದ್ಧಿಗೆ ಪೂರಕ- ಸೀತಾರಾಮ ರೈ
ಪುತ್ತೂರು: ಸವಣೂರಿನ ಪದ್ಮಾಂಭ ಪೆಟ್ರೋಲ್ ಪಂಪ್ನ ಹತ್ತಿರ ಜ. 5 ರಂದು ಮಹಾಲಿಂಗೇಶ್ವರ ವೆಹಿಕಲ್ ಝೋನ್ ಸಂಸ್ಥೆಯು ಶುಭಾರಂಭಗೊಂಡಿತು.
ಸಂಸ್ಥೆಯನ್ನು ದೀಪ ಬೆಳಗಿಸಿ, ಉದ್ಘಾಟನೆಗೈದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಸವಣೂರು ಇಂದು ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಊರಾಗಿದ್ದು, ನಾವೆಲ್ಲಾ ಒಂದಾಗಿ ಸವಣೂರಿನ ಅಭಿವೃದ್ಧಿಗೆ ಕೈಜೋಡಿಸಬೇಕು. ಪೇಟೆ ಪಟ್ಟಣಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ನಮ್ಮ ಊರಿನ ಜನರಿಗೆ ಸಿಗಬೇಕು. ಈ ನಿಟ್ಟಿನಲ್ಲಿ ಮಹಾಲಿಂಗೇಶ್ವರ ವೆಹಿಕಲ್ ಝೋನ್ ಸಂಸ್ಥೆಯು ಪ್ರಗತಿಯನ್ನು ಕಾಣಲಿ ಎಂದು ಶುಭಹಾರೈಸಿದರು.
ಸವಣೂರು ಗ್ರಾ.ಪಂ. ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯ, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಸವಣೂರು ಹಾಲು ಉತ್ವಾದಕರ ಸಹಕಾರ ಸಂಘದ ನಿಕಟಪೂರ್ವಾಧ್ಯಕ್ಷ ಸುಪ್ರೀತ್ ರೈ ಖಂಡಿಗ, ಸವಣೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಅಂಬಾ ಬ್ರದರ್ಸ್ ಸಂಸ್ಥೆಯ ಬಾಲಚಂದ್ರ ರೈ ಕೆರೆಕೋಡಿ, ಸವಣೂರು ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು, ರಾಮಣ್ಣ ನಾಯ್ಕ್, ಕೃಷ್ಣಪ್ಪ ನಾಯ್ಕ್, ನಾರಾಯಣ ನಾಯ್ಕ್, ಮಹಾಲಿಂಗ ನಾಯ್ಕ್, ದೀಪಕ್ ಶೆಟ್ಟಿ, ಗಣೇಶ್ ರೈ ಮೂಡಂಬೈಲು, ಸತೀಶ್ ರೈ ಅಂಕತಡ್ಕ, ಜಯರಾಮ ರೈ ಮೂಡಂಬೈಲು, ಸಂದೇಶ್ ಬಲ್ಯಾಯ, ನಿಶ್ಚಲ್ ಎಂ.ರೈ, ತೇಜಸ್ ಗೌಡ ಬೇರಿಕೆ, ಸಂತೋಷ್ ಬೇರಿಕೆ, ದಿನಕರ ರೈ ಬುಡನಡ್ಕ, ಅಶೋಕ್ ಪೂಜಾರಿ, ಹೈದರ್ ಆಲಿ ಐವತ್ತೋಕ್ಲು, ಇಬ್ರಾಹಿಂ ಗಡಿಪಿಲ, ಇಸುಬು ಇಂಜಿನಿಯರ್ ಮಾಂತೂರು ಸಹಿತ ಹಲವಾರು ಮಂದಿ ಭೇಟಿ ನೀಡಿ ಶುಭಕೋರಿದರು.
ಸಂಸ್ಥೆಯ ಮಾಲಕ ಸುಶಾಂತ್ ಮಾತನಾಡಿ ನಮ್ಮಲ್ಲಿ ಕಾರ್ ಸ್ಪೀಕರ್, ಕಾರ್ ಸಿಸ್ಟಮ್, ಲೆಡ್ ಪಾಗ್ ಲೈಟ್, ರಿವರ್ರ್ಸ ಕ್ಯಾಮರ, ಡೋರ್ ವೀಸರ್, ವೀಲ್ ಕ್ಯಾಫ್ ಸಹಿತ ಎಲ್ಲಾ ರೀತಿಯ ವೆಹಿಕಲ್ಗೆ ಸಂಬಂಧಪಟ್ಟ ಸಾಮಾಗ್ರಿಗಳು ಮಾರಾಟಕ್ಕೆ ಲಭ್ಯವಿದ್ದು, ಗ್ರಾಹಕರು ಪೂರ್ಣ ರೀತಿಯ ಸಹಕಾರವನ್ನು ನೀಡಬೇಕೆಂದು ವಿನಂತಿಸಿದರು. ಶಿಕ್ಷಿತ್ರವರು ಕಾರ್ಯಕ್ರಮದಲ್ಲಿ ಸಹಕರಿಸಿದರು.