ವಿದ್ಯಾರಶ್ಮಿಗೆ ಶೇ. 100 ಫಲಿತಾಂಶ

0

ಪುತ್ತೂರು : ಈ ಸಾಲಿನಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯವರು ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಹಾಜರಾದ ೧೧ ವಿದ್ಯಾರ್ಥಿಗಳಲ್ಲಿ ಎಲ್ಲರೂ ಉತ್ತೀರ್ಣಗೊಂಡು (೭ ವಿಶಿಷ್ಟ ಶ್ರೇಣಿ, ೩ ಪ್ರಥಮ ಶ್ರೇಣಿ, ೧ ದ್ವಿತೀಯ ಶ್ರೇಣಿ) ಸಂಸ್ಥೆಗೆ ೧೮ ನೇ ಬಾರಿಗೆ ಶೇ ೧೦೦ ಫಲಿತಾಂಶ ಬಂದಿರುವುದಾಗಿ ಪ್ರಾಂಶುಪಾಲ ಶ್ರೀ ಸೀತಾರಾಮ ಕೇವಳರವರು ಪ್ರಕಟಣೆಯಲ್ಲಿ ತಿಳಿಸಿರು ತ್ತಾರೆ.ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ಶ್ರೀ ಸೀತಾರಾಮ ರೈ ಸವಣೂರು ಹಾಗೂ ಆಡಳಿತಾಧಿಕಾರಿ ಶ್ರೀ ಅಶ್ವಿನ್ ಎಲ್ ಶೆಟ್ಟಿಯವರು ಅಭಿನಂದಿಸಿದರು.ವಿದ್ಯಾರ್ಥಿಗಳನ್ನು ಚಿತ್ರಕಲಾ ಶಿಕ್ಷಕ ಧನಂಜಯ ಮರ್ಕಂಜ ತರಬೇತುಗೊಳಿಸಿದ್ದರು.

ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದವರು

೧) ವಿದಿಶಾ ೮ನೇ ತರಗತಿ ೪೭೮ ( ೭೮.೮೩%) ತಂದೆ ಬಾಲಚಂದ್ರ ,
ತಾಯಿ ಲೋಹಿತಾಕ್ಷಿ ಸವಣೂರು
೨) ನಿರಂತ್ ಕುಮಾರ್ ಗೌಡ ೧೦ನೇ ತರಗತಿ ೪೫೯ (೭೬.೫%) ತಂದೆ ಪ್ರಕಾಶ್, ತಾಯಿ ಜ್ಯೋತಿ ಸಕಲೇಶ್‌ಪುರ
೩) ಅಪೂರ್ವ ಗೋಕುಲ್‌ದಾಸ್ ೮ನೇ ತರಗತಿ ೪೫೯ (೭೬.೫%) ತಂದೆ ಗೋಕುಲ್‌ದಾಸ್, ತಾಯಿ ಪ್ರಭಾದೇವಿ ಸುಳ್ಯ
೪) ತಸ್ನ ಫಾತಿಮಾ ೯ನೇ ತರಗತಿ ೪೨೯ (೭೧.೫%) ತಂದೆ ಇಬ್ರಾಹಿಂ, ತಾಯಿ ಜಮೀಲಾ ಸವಣೂರು
೫) ಶಮಾ ೯ನೇ ತರಗತಿ ೪೨೮ (೭೧.೩%) ತಂದೆ ಕೊರಗಪ್ಪ ಗೌಡ ತಾಯಿ ತಿರುಮಲೇಶ್ವರಿ ಪೆರ್ನಾಜೆ
೬) ನಿಹಾರ್ ಎಸ್ ಡಿ ೮ನೇ ತರಗತಿ ೪೨೫ (೭೦,೮೮%) ತಂದೆ ದಯಾನಂದ ತಾಯಿ ವೇದಾವತಿ ಸವಣೂರು
೭) ಮೋನಿಷ್‌ಗೌಡ ವೈ ಎನ್ ೧೦ನೇ ತರಗತಿ ೪೨೧ (೭೦,೧೬%) ತಂದೆ ನಾಗರಾಜು, ತಾಯಿ ಪುಷ್ಪಾ ಹಾಸನ

LEAVE A REPLY

Please enter your comment!
Please enter your name here