ಪುತ್ತೂರು : ಸುಮಾರು 30 ವರುಷಗಳಿಗಳಿಂದ ಮುಖ್ಯ ರಸ್ತೆ , ಶ್ರೀ ಕಾಂತ್ ಲಾಡ್ಜ್ ಮುಂಭಾಗದ ಕಟ್ಟಡದಲ್ಲಿ ಪೊಪ್ಯುಲರ್ ಕಬ್ಬಿನ ಜ್ಯೂಸ್ ಸೆಂಟರ್ ಸಂಸ್ಥೆ ಯನ್ನು ನಡೆಸಿಕೊಂಡು ಬಂದು , ಇದೀಗ ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ಹಾಗೂ ಡಾಕ್ಯುಮೆಂಟರಿ ಕಾರ್ಯ ನಿರ್ವಹಿಸುತ್ತಿದ್ದ , ಬಿಜೆಪಿ ಕಾರ್ಯಕರ್ತ ಜೊತೆಗೆ ತನ್ನದೇ ರೀತಿಯಲ್ಲಿ ಸಮಾಜಮುಖಿ ಸೇವೆ ಮೂಲಕ ಗುರುತಿಸಿಕೊಂಡಿದ್ದ ,ಡಿ.25 ರಂದು ನಿಧನರಾದ ,ನೆಲ್ಲಿಕಟ್ಟೆ ಮಲ್ಯ ಕಂಪೌಂಡ್ ನಿವಾಸಿ ಗಣೇಶ್ ಶೆಣೈ (ಗಣ್ಣ) ಇವರಿಗೆ , ಸಂತೆಕಟ್ಟೆ ಬಳಿಯಿರುವ ಮಂಗಳಾಮೃತ ಸೌದ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯೂ ಜ. 7 ರಂದು ಸಂಜೆ ಪುತ್ತೂರು ಕೋಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ನ್ಯಾಯವಾದಿ ನಿರ್ಮಲ್ ಕುಮಾರ್ ಜೈನ್ ಮಾತನಾಡಿ ,ಕಬ್ಬಿನ ರೀತಿಯಲ್ಲೇ ತನ್ನ ಜೀವನವನ್ನೂ ಸವೆಸಿ , ಹಾಲಿನ ಥರವೇ ಸಿಹಿಯನ್ನು ಇತರರ ಪಾಲಿಗೆ ಖುಷಿಯಾಗಿ ಹಂಚಿದವರು ಗಣೇಶ್ ಶೆಣೈ. ಅದೇ ರೀತಿ ಸಮಾಜಮುಖಿ ಕಾರ್ಯದಲ್ಲೂ ಸೈ ಎನಿಸಿಕೊಂಡವರೆಂದು ಹೇಳಿ , ನುಡಿ ನಮನ ಸಲ್ಲಿಸಿದರು.
ಇನ್ನೋರ್ವ ನ್ಯಾಯವಾದಿ ಗೌರಿಶ್ಚಂದ್ರ ಶಾನ್ ಭೋಗ್ ಮಾತನಾಡಿ , ಪ್ರತಿ ಮನುಷ್ಯನ ಆಗಮನವು ಸಹಜ. ಅದೇ ರೀತಿ , ಸಾವು ಆಕಸ್ಮಿಕವಾಗಿರತ್ತದೆ. ಆದರೆ , ಗಣೇಶ್ ಶೆಣೈಯವರ ಸಾವೂ ಬಹಳ ಆಕಸ್ಮಿಕವೆಂದೂ ತನ್ನ ನೋವುವನ್ನು ಮಾತಿನ ಮೂಲಕ ವ್ಯಕ್ತಪಡಿಸಿದರು.
ನ್ಯಾಯವಾದಿ ಎಂ ಪಿ ಅಬೂಬಕ್ಕರ್ ಮಾತನಾಡಿ , “ಮೈಯನ್ನು ಹಿಂಡಿ ನೊಂದರೂ ಕಬ್ಬು ಸಿಹಿಯ ಕೊಡುವುದು ಅನ್ನೋ ಮಾತಿಗೆ ಉ್ತಮ ಉದಾಹರಣೆ ಯಾಗಿ , ಕಬ್ಬಿನ ರಸದಂತೆ ಬಾಳಿ ,ಬದುಕಿದ್ದಾರೆಯೆಂದು ಹೇಳಿ ,ನಮನ ಸಲ್ಲಿಸಿದರು.
ರಾಜಕೀಯ ಮುಖಂಡ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ , ಏಷ್ಟೂ ದಿನ ಬದುಕುತ್ತೇವೆ ? ಎನ್ನುವುದಕ್ಕಿಂತಲೂ , ಎಷ್ಟೂ ಜನರ ಪ್ರೀತಿ , ಸ್ನೇಹ ಗಳಿಸುತ್ತೇವೆ ಅನ್ನೋದು ಮುಖ್ಯ. ಇಂಥಹ ವ್ಯಕ್ತಿಯನ್ನು ನೆನಪಿಸೋ ಕಾರ್ಯ ಸದಾವಾಗಲಿಯೆಂದು ಹೇಳಿದರು.
ನ್ಯಾಯವಾದಿ ಭಾಸ್ಕರ ಕೊಡೀಂಬಾಳ ಮಾತನಾಡಿ, ಸಣ್ಣ ಮುಗುಳ್ನಗೆ ಮೂಲಕವೇ ಪ್ರೀತಿ ಹಂಚಿದ ವ್ಯಕ್ತಿ ಗಣೇಶ್ ಶೆಣೈ. ಯಾರೊಂದಿಗೂ ಸಿಟ್ಟು ,ಜಗಳವಾಡಿದವರಲ್ಲ. ಅವರ ಮರಣವು ಸಂಕಟ ,ನೋವು ತಂದಿದೆಯೆಂದು ಹೇಳಿದರು. ಕಾರ್ಯಕ್ರಮಕ್ಕೂ ಮೊದಲು ಎಲ್ಲರೂ ಸಭೆಯಲ್ಲಿ ಒಂದು ನಿಮಿಷ ಎದ್ದುನಿಂತು ಮೃತರಿಗೆ ಗೌರವ ಸೂಚಿಸಿದರು.
ಕಿರಣ್ ಕುಮಾರ್ ಅಲಂಕಾರ್ , ನಿತಿನ್ ಮಂಗಳಾ , ಭಾಮಿ ಜಗದೀಶ್ ಶೆಣೈ , ಭರತ್ ರಾವ್ ಹಾಗೂ ಅಶೋಕ ರಾವ್ ಬಪ್ಪಳಿಗೆ , ಮಾಜಿ ಪುರಸಭಾ ಸದಸ್ಯ ಮಹೇಶ್ ಕುಮಾರ್ ಕಲ್ಲೇಗ , ಶಾಂತರಾಮ , ಸುಂದರ ಗಾಣಿಗ , ಗಿರೀಶ್ , ಅವಿನಾಶ್ , ರವಿ ಪ್ರೋವಿಸನ್ ಸ್ಟೋರ್ಸ್ ನ ರವಿಚಂದ್ರ , ಉದ್ಯಮಿ ರೋಶನ್ ರೈ ಬನ್ನೂರು, ಸಹಿತ ಹಲವಾರು ಮೃತರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಇದ್ದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭಾವಚಿತ್ರ ಕ್ಕೆ ಎಲ್ಲರೂ ಪುಷ್ಪಾರ್ಚನೆ ಸಲ್ಲಿಸಿದರು