ಜ.14,15: ಕಾಂಚನದಲ್ಲಿ ’ಕಾಂಚನೋತ್ಸವ 2023’, ಖ್ಯಾತ ದಿಗ್ಗಜರಿಂದ ಸಂಗೀತ ಕಛೇರಿ

0

ನೆಲ್ಯಾಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ಪ್ರಸ್ತುತ ಪಡಿಸುವ ೬೯ನೇ ವರ್ಷದ ಕಲಾಸೇವೆಯ ’ಕಾಂಚನೋತ್ಸವ ೨೦೨೩’, ೬೯ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರುಗಳಾದ ಸಂಗೀರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ದಿನಾಚರಣೆ ಜ.೧೪ ಮತ್ತು ೧೫ರಂದು ಬಜತ್ತೂರು ಗ್ರಾಮದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯಲ್ಲಿ ಟ್ರಸ್‌ನ ಅಧ್ಯಕ್ಷರೂ ಆಗಿರುವ ಪದ್ಮವಿಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯಲಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂರವರು ತಿಳಿಸಿದ್ದಾರೆ.


ಜ.೧೪ರಂದು ಮಧ್ಯಾಹ್ನ ೨ರಿಂದ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ ೬ ಗಂಟೆಗೆ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದ್ದು ವಿದ್ವಾನ್ ವಿಠಲ್ ರಾಮಮೂರ್ತಿ (ವಯೊಲಿನ್), ವಿದ್ವಾನ್ ವಿ.ವಿ.ಎಸ್.ಮುರಾರಿ(ವಯೊಲಾ), ಸಂಗೀತ ಕಲಾನಿಧಿ ವಿದ್ವಾನ್ ಟ್ರಿಜಿ ಶಂಕರನ್(ಮೃದಂಗ)ಹಾಗೂ ವಿದ್ವಾನ್ ಕೆ.ವಿ.ಗೋಪಾಲಕೃಷ್ಣನ್(ಖಂಜಿರ)ರವರು ಕಛೇರಿ ನಡೆಸಿಕೊಡಲಿದ್ದಾರೆ. ಸಂಜೆ ವೇ.ಬ್ರ.ನಾರಾಯಣ ಬಡಕಿಲ್ಲಾಯರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.

ಜ.೧೫ರಂದು ಬೆಳಿಗ್ಗೆ ಗಣಹೋಮ, ೮.೩೦ಕ್ಕೆ ಉಂಛವೃತ್ತಿ, ಸಂತ ಶ್ರೀ ತ್ಯಾಗರಾಜರ ’ಉತ್ಸವ ಸಂಪ್ರದಾಯ ಮತ್ತು ದಿವ್ಯನಾಮ ಸಂಕೀರ್ತನೆ’ಗಳ ವಾದ್ಯ-ಗಾಯನ ಭಜನೆಯೊಂದಿಗೆ ಸಂಗೀತ ನಡಿಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯವರೆಗೆ ನಡೆಯಲಿದೆ. ೯.೩೦ಕ್ಕೆ ಶ್ರೀ ಪರಂದರ ದಾಸರ ಪಿಳ್ಳಾರಿ ಗೀತೆಗಳು ಮತ್ತು ಶ್ರೀ ತ್ಯಾಗರಾಜರ ಪಂಚರತ್ನಗಳ ಗೋಷ್ಠಿಗಾನ, ೧೧ರಿಂದ ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಸಂಜೆ ೬ರಿಂದ ಅಮೋಘ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ. ವಿದ್ವಾನ್ ಸಂದೀಪ್ ನಾರಾಯಣ್(ಗಾಯನ), ವಿದ್ವಾನ್ ವಿ.ವಿ.ಎಸ್.ಮುರಾರಿ(ಪಿಟೀಲು), ಸಂಗೀತ ಕಲಾನಿಧಿ ವಿದ್ವಾನ್ ಟ್ರಿಜಿ ಶಂಕರನ್(ಮೃದಂಗ)ಹಾಗೂ ವಿದ್ವಾನ್ ಕೆ.ವಿ.ಗೋಪಾಲಕೃಷ್ಣನ್(ಖಂಜಿರ)ರವರು ಕಛೇರಿ ನಡೆಸಿಕೊಡಲಿದ್ದಾರೆ. ಸಂಜೆ ದುರ್ಗಾನಮಸ್ಕಾರ ಪೂಜೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here