ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಣಮ್ಯ ಅಗಳಿ ಚಿನ್ನದ ಪದಕ

0

ಕಾಣಿಯೂರು: ಪಾಂಡಿಚೇರಿ ಸರ್ಕಾರದ ವತಿಯಿಂದ ಜ 2ರಿಂದ 7ರ ವರೆಗೆ ನಡೆದ 28ನೇ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಯೋಗ ಸಾಧಕಿ ಪ್ರಣಮ್ಯ ಅಗಳಿ ಚಿನ್ನದ ಪದಕ ಪಡೆದು ಪಾಂಡಿಚೇರಿ ಮುಖ್ಯ ಮಂತ್ರಿ ಯವರಿಂದ ಪ್ರಶಸ್ತಿ ಸ್ವೀಕರಿಸಿ ರುತ್ತಾರೆ.

ಭಾರತವು ಸೇರಿದಂತೆ ಸುಮಾರು 20 ದೇಶಗಳಿಂದ 5000 ಕ್ಕಿಂತ ಹೆಚ್ಚಿನ ಯೋಗ ಪಟುಗಳು ಭಾಗವಹಿಸಿದ್ದರು. ಯೋಗ ಸಾಧಕರಾದ ಅಗಳಿ ಚಂದ್ರಹಾಸ್ ಹಾಗೂ ಹೇಮಾ ಚಂದ್ರಹಾಸ್ ಇವರ ಪುತ್ರಿ. ಪ್ರಣಮ್ಯ ಅಗಳಿ ಪುತ್ತೂರು ಅಕ್ಷಯ ಕಾಲೇಜ್ ವಿದ್ಯಾರ್ಥಿನಿ. ಯೋಗದಲ್ಲಿ ಹಲವಾರು ಬಾರಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ ಗಳನ್ನೂ ಪಡೆದಿರುವ ಯೋಗ ಸಾಧಕಿ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here