ಡೊನ್ ಬೊಸ್ಕೊ ಕ್ಲಬ್‌ನಿಂದ ಪುತ್ತೂರು,ಮರೀಲ್,ಬನ್ನೂರು ಚರ್ಚ್ ವ್ಯಾಪ್ತಿಯ ಕ್ರಿಕೆಟ್ ಆಟಗಾರರ ಸಿಪಿಎಲ್ 2023-ಸೀಸನ್ 2, ಉದ್ಘಾಟನೆ: ಕ್ರೀಡೆಯಿಂದ ಆಟಗಾರರ ನಡುವೆ ಬಾಂಧವ್ಯ ಬೆಸೆಯುತ್ತದೆ-ಮೌರಿಸ್ ಮಸ್ಕರೇನ್ಹಸ್

0

 

ಪುತ್ತೂರು: ಕ್ರೀಡೆಯು ಮಾನವನ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯಿಂದ ಆಟಗಾರರ ಮಧ್ಯೆ ಪರಸ್ಪರ ಬಾಂಧವ್ಯ ಬೆಸೆಯುವುದಲ್ಲದೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುನ್ನುಡಿಯಾಗಿದ್ದು ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಆಡಬೇಕು ಎಂದು ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ರವರು ಹೇಳಿದರು.


ಮಾಯಿದೆ ದೇವುಸ್ ಚರ್ಚ್‌ನ ಡೊನ್ ಬೊಸ್ಕೊ ಕ್ಲಬ್ ಸಂಘಟನೆಯ ವತಿಯಿಂದ ಪುತ್ತೂರಿನಲ್ಲಿ ದ್ವಿತೀಯ ಬಾರಿಗೆ ಪುತ್ತೂರು ಮಾಯಿದೆ ದೇವುಸ್ ಚರ್ಚ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್ ಹಾಗೂ ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಕ್ರಿಶ್ಚಿಯನ್ ಸಮುದಾಯದ ಕ್ರಿಕೆಟ್ ಆಟಗಾರರನ್ನೊಳಗೊಂಡ `ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ೨೦೨3-ಸೀಸನ್ 2′ ಜ.08 ರಂದು ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಿದ್ದು, ಈ ಕ್ರೀಡಾಕೂಟದ ಉದ್ಘಾಟನೆಯನ್ನು ಅವರು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಮಾತನಾಡಿದರು. ಡೊನ್ ಬೊಸ್ಕೊ ಕ್ಲಬ್ ನವರು ಕಳೆದ ವರ್ಷ ಸಿಪಿಎಲ್ ಹೆಸರಿನಲ್ಲಿ ಆರಂಭಿಸಿದ ಈ ಟೂರ್ನಿ ಬಹಳ ಯಶಸ್ಸು ಕಂಡಿತ್ತು. ಕ್ರೀಡಾ ಟೂರ್ನಿಯನ್ನು ಆಯೋಜಿಸುವುದು ಅಷ್ಟು ಸುಲಭದ ಮಾತಲ್ಲ, ಅದನ್ನು ಆಯೋಜಿಸುವವರಿಗೆ ಗೊತ್ತು ಅದರ ಕಷ್ಟ. ದಾನಿಗಳ ಸಹಕಾರದಿಂದ, ಹಿತೈಷಿಗಳ ಪ್ರೋತ್ಸಾಹದಿಂದ ಟೂರ್ನಿಯು ಯಶಸ್ವಿಯ ಹೆಜ್ಜೆಗಳನ್ನು ಕಂಡುಕೊಳ್ಳುವಂತಾಗಿದೆ. ಇದು ನಿರಂತರ ಮುಂದುವರೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಮುಖ್ಯ ಅತಿಥಿ ಹಾಗೂ ಎಸ್.ಎಲ್ ಗ್ಲ್ಯಾಡಿಯೇಟರ್ಸ್ ತಂಡದ ಮಾಲಕ ಸಿಲ್ವೆಸ್ಟರ್ ಡಿ’ ಸೋಜ, ಬನ್ನೂರು ಸಂತ ಅಂತೋನಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಪಾಲನಾ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಜೋನ್ ಸಿರಿಲ್ ರೊಡ್ರಿಗಸ್, ಫಿಲೋಮಿನಾ ಕಾಲೇಜಿನ ನಿವೃತ್ತ ಮ್ಯಾನೇಜರ್ ವಿ.ಜೆ ಫೆರ್ನಾಂಡೀಸ್, ತಂಡಗಳ ಮಾಲಕರಾದ ಕ್ರಿಶಲ್ ವಾರಿಯರ್ಸ್ ತಂಡದ ಕಿರಣ್ ಡಿ’ಸೋಜ ಹಾಗೂ ಮೆಲ್ವಿನ್ ಪಾಯಿಸ್, ಸಿಝ್ಲರ್ ಸ್ಟ್ರೈಕರ್ಸ್ ತಂಡದ ರೋಶನ್ ರೆಬೆಲ್ಲೋ, ಫ್ಲೈ ಝೋನ್ ಅಟ್ಯಾಕರ್ಸ್ ತಂಡದ ಪ್ರದೀಪ್ ವೇಗಸ್(ಬಾಬಾ), ಲೂವಿಸ್ ಕ್ರಿಕೆಟರ್ಸ್ ತಂಡದ ಲೆಸ್ಟರ್ ಲೂವಿಸ್, ಸೋಜಾ ಸೂಪರ್ ಕಿಂಗ್ಸ್ ನ ದೀಪಕ್ ಮಿನೇಜಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಲಬ್ ಅಧ್ಯಕ್ಷ ಫೆಬಿಯನ್ ಗೋವಿಯಸ್ ಸ್ವಾಗತಿಸಿ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸಿಲ್ವೆಸ್ಟರ್ ಗೊನ್ಸಾಲ್ವಿಸ್ ವಂದಿಸಿದರು. ಕ್ರೀಡಾ ಸಂಯೋಜಕ ಪ್ರಕಾಶ್ ಸಿಕ್ವೇರಾ ಚಿಕ್ಕಪುತ್ತೂರು ಕಾರ್ಯಕ್ರಮ ನಿರೂಪಿಸಿದರು. ಸಂಯೋಜಕರಾದ ರಾಕೇಶ್ ಮಸ್ಕರೇನ್ಹಸ್, ಆಲನ್ ಮಿನೇಜಸ್, ರೋಹನ್ ಡಾಯಸ್ ಸೇರಿದಂತೆ ಡೊನ್ ಬೊಸ್ಕೊ ಕ್ಲಬ್ ಸದಸ್ಯರು ಸಹಕರಿಸಿದರು.

ಮೊ|ಪತ್ರಾವೋ ಪ್ರತಿಮೆಗೆ ಹೂಹಾರ..
ಕ್ರೀಡಾಕೂಟದ ಆರಂಭಕ್ಕೆ ಮುನ್ನ ಸಂತ ಫಿಲೋಮಿನಾ ಪ್ರೌಢಶಾಲೆಯ ಬಳಿಯಿರುವ ಪುತ್ತೂರಿನ ಶಿಕ್ಷಣ ಶಿಲ್ಪಿ ಎನಿಸಿದ ಮೊ|ಆಂಟನಿ ಪತ್ರಾವೋರವರ ಪ್ರತಿಮೆಗೆ ಮುಖ್ಯ ಅತಿಥಿ ಹಾಗೂ ಎಸ್.ಎಲ್ ಗ್ಲ್ಯಾಡಿಯೇಟರ್ಸ್ ತಂಡದ ಮಾಲಕ ಸಿಲ್ವೆಸ್ಟರ್ ಡಿ’ ಸೋಜ ಹಾಗೂ ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಹಾಗೂ ಕ್ಲಬ್ ಕಾರ್ಯದರ್ಶಿ ಜೆರಾಲ್ಡ್ ಡಿ’ಕೋಸ್ಟರವರು ಜೊತೆಗೂಡಿ ಹೂಹಾರ ಹಾಕಿ ಪ್ರಾರ್ಥನೆ ಸಲ್ಲಿಸಲಾಯಿತು. ಮೊ|ಪತ್ರಾವೋರವರ ಪ್ರತಿಮೆಗೆ ಫ್ಲೈ ಝೋನ್ ಅಟ್ಯಾಕರ್ಸ್ ತಂಡದ ಮಾಲಕ ಹಾಗೂ ಪೆಟಲ್ಸ್ ಫ್ಲವರ್ಸ್ ಸಂಸ್ಥೆಯ ಮಾಲಕ ಪ್ರದೀಪ್ ವೇಗಸ್(ಬಾಬಾ)ರವರು ಹೂಗಳಿಂದ ಶೃಂಗಾರಗೊಳಿಸಿದ್ದರು.

‘ಸುದ್ದಿ’ ನೇರ ಪ್ರಸಾರ..
ಸಿಪಿಎಲ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿಯನ್ನು ‘ಸುದ್ದಿ’ ಯೂಟ್ಯೂಬ್ ಚಾನೆಲ್ ನೇರ ಪ್ರಸಾರ ಮಾಡಿತ್ತು. ಸಾವಿರಾರು ವೀಕ್ಷಕರು ನೇರಪ್ರಸಾರವನ್ನು ವೀಕ್ಷಿಸಿದರು. ಸಿಪಿಎಲ್ ಸೀಸನ್-1 ಪಂದ್ಯಾವಳಿಯನ್ನು ಸುದ್ದಿ ನೇರ ಪ್ರಸಾರ ಮಾಡಿತ್ತು.

LEAVE A REPLY

Please enter your comment!
Please enter your name here