ಮನು ಎಂ. ರೈ ರವರ ಮಾಲಕತ್ವದ ಕಟ್ಟಡ ನಿರ್ಮಾಣ ಸಂಸ್ಥೆ Munnalayi Infra Projectsಗೆ ACCE (INDIA) ಅಲ್ಟ್ರಾಟೆಕ್‌ಅವಾರ್ಡ್ಸ್

0

ಪುತ್ತೂರು: ಪುತ್ತೂರಿನ ಮನು ಎಂ. ರೈ ರವರ ಮಾಲಕತ್ವದ ಕಟ್ಟಡ ನಿರ್ಮಾಣ ಸಂಸ್ಥೆ Munnalayi Infra Projects ಗೆ  ACCE (INDIA)  ಅಲ್ಟ್ರಾಟೆಕ್ ಅವಾರ್ಡ್ಸ್-2022 ದೊರಕಿದೆ. ಮಂಗಳೂರಿನ ಹಂಪನಕಟ್ಟ ಮಿಲಾಗ್ರಿಸ್ ಹಾಲ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಅಸೋಸಿಯೇಷನ್ ಆಫ್ consulting civil engineers (india) ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಲಿ. ಅಲ್ಟ್ರಾಟೆಕ್ ಅವಾರ್ಡ್ಸ್ 2022 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಿರ್ಮಾಣ ಉದ್ಯಮದಲ್ಲಿ ಅದ್ವಿತೀಯ ಸಾಧನೆ ಮಾಡಿದ ಮನು. ಎಂ. ರೈ ಪುತ್ತೂರು ರವರ ಮಾಲೀಕತ್ವದ ಕಟ್ಟಡ ನಿರ್ಮಾಣ ಸಂಸ್ಥೆ Munnalayi Infra Projects, ಇತ್ತೀಚಿಗೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಪಾಣೆ ಮಂಗಳೂರಿನಲ್ಲಿ ನಿರ್ಮಿಸಿದ ವಸತಿ ಮನೆಗೆAssociation of Consulting Civil Engineers- ACCE (INDIA) ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ( Ultra Tech Cement Ltd) ಕೊಡಮಾಡುವ Well built residential villa award ಪ್ರಶಸ್ತಿ ಲಭಿಸಿದೆ. ಮುನ್ನಲಾಯಿ ಇಂಫ್ರಾ ಪ್ರಾಜೆಕ್ಟ್‌ಗೆ ಉತ್ತಮ ವಿನ್ಯಾಸಗಾರ ಪ್ರಶಸ್ತಿ ಮತ್ತು ಮನೆಯನ್ನು ತಾಂತ್ರಿಕವಾಗಿ ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡಿದ ಮನು ಎಮ್. ರೈ ಯವರಿಗೆ ಉತ್ತಮ constructor builder ಪ್ರಶಸ್ತಿ ಲಭಿಸಿದೆ.

Architectural & structural Designs, green concept & rain water harvesting, safety practices adopted during construction, optimum utilisation of site area & floor area, Types of contrete used & quality assement of materials, technical services & labour trainings, challenges faced during construction ಈ ಎಲ್ಲಾ quality ಗಳನ್ನು ಗಣನೆಗೆ ತೆಗೆದುಕೊಂಡು ಪ್ರಶಸ್ತಿಯನ್ನು ನೀಡಲಾಗಿದೆ.

ನರಿಮೊಗರು ಗ್ರಾಮದ ನಂದಾದೀಪ ನಿವಾಸಿ ಎಮ್.ಮೋಹನ್ ರೈ ಮತ್ತು ಗೀತಾಮೋಹನ್ ರೈ ದಂಪತಿ ಪುತ್ರರಾದ ಇವರು ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಿಕ್ಷಣ, ಪಿಯುಸಿ ಹಾಗೂ ಪದವಿ, ನಿಟ್ಟೆ ಯುನಿವರ್ಸಿಟಿಯಲ್ಲಿ ಎಮ್‌ಬಿಎ ಪದವಿ ಪಡೆದು ಬಳಿಕ ಕಟ್ಟಡ ನಿರ್ಮಾಣ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here