Saturday, February 4, 2023
Homeಕ್ರೈಂ ನ್ಯೂಸ್ರೆಂಜದಲ್ಲಿ ಸರಣಿ ಅಪಘಾತ; ಕೂದಲಂತರದಲ್ಲಿ ತಪ್ಪಿದ ದುರಂತ

ರೆಂಜದಲ್ಲಿ ಸರಣಿ ಅಪಘಾತ; ಕೂದಲಂತರದಲ್ಲಿ ತಪ್ಪಿದ ದುರಂತ

ಪುತ್ತೂರು: ಕಾರೊಂದು ನಿಲ್ಲಿಸಿದ್ದ ಕಾರು, ರಿಕ್ಷಾ, ಜೀಪಿಗೆ ಡಿಕ್ಕಿ ಹೊಡೆದ ಘಟನೆ ಜ.8ರಂದು ರಾತ್ರಿ ಬೆಟ್ಟಂಪಾಡಿ ಗ್ರಾಮದ ರೆಂಜದಲ್ಲಿ ನಡೆದಿದೆ. 

ಪಾಣಾಜೆ ಕಡೆಯಿಂದ ಬಂದ ಮಾರುತಿ ಇಗ್ನೀಸ್ ( ಕೆಎ19 ಎಂ.ಜಿ 9403) ಕಾರು ರೆಂಜ ವೃತ್ತದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಆಟೋ ರಿಕ್ಷಾ, ಆಲ್ಟೋ ಕಾರು ಹಾಗೂ ಜೀಪಿಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ವಾಹನದಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಯಾವುದೇ ರೀತಿಯ ಪ್ರಾಣಾಪಾಯ ಉಂಟಾಗಿಲ್ಲ.

ತಪ್ಪಿದ ದುರಂತ; ರೆಂಜದಲ್ಲಿ ಮನೆಯ ಗೃಹಪ್ರವೇಶದ ಕುಟ್ಟಿ ಪೂಜೆ ನಡೆಯುತ್ತಿದ್ದು ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಅಲ್ಲಿಗೆ ತೆರಳಿದ್ದರು. ಕಾರಲ್ಲಿದ್ದವರು ಅಪಘಾತ ಸಮಯದಲ್ಲಿ ಕಾರ್ಯಕ್ರಮ ನಡೆಯುವ ಮನೆಯಲ್ಲಿದ್ದುದರಿಂದ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಅಪಘಾತ ನಡೆದ ಸ್ಥಳದಲ್ಲಿಯೇ ವಿದ್ಯುತ್ ಎಚ್.ಟಿ ಲೈನ್ ವಿದ್ಯುತ್ ಕಂಬವಿದ್ದರೂ ಕೂದಲಂತರದಲ್ಲಿ ಅನಾಹುತ ತಪ್ಪಿದೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

Must Read

spot_img
error: Content is protected !!