ಮೊದೆಲ್ಕಾಡಿ ತಾರನಾಥ ರೈ ಮದಕ ನಿಧನ 

0

ಪುತ್ತೂರು: ಕೋಟೆಕಾರು  ಆನಂದಾಶ್ರಮ ಅನುದಾನಿತ ಪ್ರೌಢಶಾಲೆಯಲ್ಲಿ ಸುಮಾರು 32 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬೆಟ್ಟಂಪಾಡಿ ಗ್ರಾಮದ ಮೊದೆಲ್ಕಾಡಿ ತಾರನಾಥ ರೈ ಮದಕರವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಜ. 7 ರಂದು ನಿಧನರಾದರು.
ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು ಇವರ ಅದೆಷ್ಟೋ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ  ಕ್ರೀಡೆಗಳಲ್ಲಿ ಸಾಧನೆಯನ್ನು ಮಾಡಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾಗಿ,  ಸಲಹೆಗಾರರಾಗಿಯು ಸೇವೆ ಸಲ್ಲಿಸಿರುತ್ತಾರೆ. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ, ಕಬಡ್ಡಿ ಪಂದ್ಯಾಟದ  ರಾಷ್ಟ್ರಮಟ್ಟದ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಮೃತರು ಪತ್ನಿ ವತ್ಸಲಾ ಟಿ. ರೈ, ಪುತ್ರಿ ಭವ್ಯಶ್ರೀ ರೈ, ಪುತ್ರ ಧನುಷ್ ರೈ, ಸಹೋದರಿಯರಾದ ಶಾಂಭವಿ ಜೆ. ಮಾರ್ಲ, ಚಂದ್ರಾವತಿ ಎಸ್. ಕೆ‌ಪಿ. ಭಂಡಾರಿ, ರತ್ನಾವತಿ ಎಸ್. ಭಂಡಾರಿ, ಸಹೋದರರಾದ ಲೋಕನಾಥ ರೈ, ವಿಠಲ ರೈ ಹಾಗು ಅರುಣ್ ಪ್ರಕಾಶ್ ರೈಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here