ಕಿಸ್ಸಾ ಕುರ್ಸಿಕಾ…

0

ಕುರ್ಚಿಗಾಗಿ ಜನ ಏನು ಬೇಕಾದರೂ ಮಾಡಬಲ್ಲರು. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲ್ಲೊಂದು ಕುರ್ಚಿ ಯಾರಿಗೂ ಬೇಡವಾಗಿದೆ. 

ಪುತ್ತೂರು ತಾಲೂಕು ಕಚೇರಿ ಮುಂಭಾಗದಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಮಾಡಲಾದ ಆಸನದ ವ್ಯವಸ್ಥೆ ಅಪಾಯಕಾರಿಯಾಗಿದೆ. ಕುರ್ಚಿಯ ಕಾಲು ತುಂಡಾಗಿದ್ದು ಕುಳಿತರೆ ಭೂಸ್ಪರ್ಶ ಖಂಡಿತ. ಇನ್ನು ಪರಚಿದರೆ ಟಿ.ಟಿ ಇಂಜೆಕ್ಷನ್‌ ಗ್ಯಾರಂಟಿ ತೆಗೆದುಕೊಳ್ಳಲೇ ಬೇಕು. ಇದು ಅಧಿಕಾರದ ಕುರ್ಚಿಯಲ್ಲದ ಕಾರಣ ಇದರ ಬಗ್ಗೆ ಗಮನಹರಿಸುವವರೇ ಇಲ್ಲ. ಇನ್ನು ಬದಲಿ ವ್ಯವಸ್ಥೆ ಮಾಡಬೇಕಾದವರು ಕಣ್ಣಿದ್ದು ಕುರುಡಾಗಿದ್ದಾರೆ. 

ಪುತ್ತೂರು ತಾಲೂಕು ಕಚೇರಿಯ ಈ ಕಿಸ್ಸಾ ಕುರ್ಸಿ ಕಾ..ಗೆ ಪೂರ್ಣ ವಿರಾಮ ಹಾಕುವವರು ಯಾರು ಎಂಬುದೇ ಎಲ್ಲರ ಪ್ರಶ್ನೆ…

LEAVE A REPLY

Please enter your comment!
Please enter your name here