ಪುತ್ತೂರು: ಇಲ್ಲಿನ ಜಿಡೆಕಲ್ಲಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ತಂಡವು ಜ. 5 ಹಾಗೂ 6ರಂದು ಭೇಟಿ ನೀಡಿ ಕಾಲೇಜಿನ ಆಡಳಿತ, ಶೈಕ್ಷಣಿಕ, ಪಠ್ಯೇತರ, ಕ್ರೀಡಾ ಸೌಕರ್ಯಗಳನ್ನು ಪರಿಶೀಲಿಸಿ ಕಾಲೇಜಿಗೆ ಬಿ+ (ಸಿಜಿಪಿಎ 2.68 ಅಂಕದೊಂದಿಗೆ) ಮಾನ್ಯತೆನೀಡಿರುತ್ತದೆ. ನ್ಯಾಕ್ ಪೀರ್‌ತಂಡದ ಮುಖ್ಯಸ್ಥರಾಗಿ ಕುರುಕ್ಷೇತ್ರ ವಿಶ್ವವಿದ್ಯಾನಿಲಯ ಹರಿಯಾಣದ ವಿಶ್ರಾಂತ ಕುಲಪತಿ ಡಾ. ಮದನ ಮೋಹನ ಗೋಯೆಲ್, ಸದಸ್ಯ-ಸಂಚಾಲಕರಾಗಿ ಹೈದರಾಬಾದ್ ವಿಶ್ವವಿದ್ಯಾನಿಲಯ ತೆಲಂಗಾಣ, ಇಲ್ಲಿಯ ಡಾ. ರೇಖಾ ಪಾಂಡೆ ಹಾಗೂ ಸದಸ್ಯರಾಗಿ ಅರುಣಾಚಲ ಪ್ರದೇಶದ ಸರಕಾರಿ ಕಾಲೇಜು ಬೊಂಬ್ಡಿಲದ ಪ್ರಾಂಶುಪಾಲರಾದ ಪ್ರೊ. ಸಾಂಗ್ಜಾ ಖಂಡು ಆಗಮಿಸಿ ಕಾಲೇಜಿನ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾಲೇಜಿಗೆ ಉತ್ತಮ ಶ್ರೇಯಾಂಕವನ್ನು ಗಳಿಸುವಲ್ಲಿ ಬೋಧಕ, ಬೋಧಕೇತರ ವೃಂದ, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯವರು ಸಹಕರಿಸಿದ್ದಾರೆ ಎಂದು ಕಾಲೇಜಿನ ಪ್ರತಾಂಶುಪಾಲರು ತಿಳಿಸಿದ್ದಾರೆ.