ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿಗಳ ವಿಜ್ಞಾನ ಯೋಜನೆ ರಾಜ್ಯ ಮಟ್ಟಕ್ಕೆ ಆಯ್ಕೆ

0

ಉಪ್ಪಿನಂಗಡಿ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವುಗಳ ಸಹಯೋಗದೊಂದಿಗೆ ಗುರುವಾಯನಕೆರೆ ಸರಕಾರಿ ಪೌಢಶಾಲೆಯಲ್ಲಿ ಜ.9ರಂದು ನಡೆದ 30ನೇ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿಗಳಾದ ದೃಶ್ ಹಾಗೂ ಅಹಸನ್ ವದೂದ್ ಇವರ Widening of road margin, A threat to tree eco system. Is healthy community a myth? ಎನ್ನುವ ವಿಜ್ಞಾನ ಯೋಜನೆ ಹಾಗೂ 8ನೇ ತರಗತಿಯ ಸಾನ್ವಿಕ್ಷ ಪಿ.ವಿ ಮತ್ತು ಸಿಂಧೂರ ಇವರ Yellow Oleander a natural repellent for Giant African Snail, An approach towards healthy eco system. ಎನ್ನುವ ವಿಜ್ಞಾನ ಯೋಜನೆಗಳು ಕಲಬುರ್ಗಿಯಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಮಾವೇಶಕ್ಕೆ ಆಯ್ಕೆಯಾಗಿರುತ್ತದೆ. ಈ ಯೋಜನೆಗಳಿಗೆ ಸಂಸ್ಥೆಯ ವಿಜ್ಞಾನ ಶಿಕ್ಷಕಿ ನಿಶಿತ್ ಕೆ.ಕೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here