ಪುತ್ತೂರು : ಕಳೆದ ಏಳು ವರುಷಗಳಿಂದ ಇಲ್ಲಿನ ಕಲ್ಲಾರೆ ಮುಖ್ಯರಸ್ತೆಯ ಶ್ರೀಮಹಾಲಕ್ಷ್ಮಿ ಸಂಕೀರ್ಣದ ಮೊದಲ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಶ್ರೀಮಾತಾ ಸೌಹಾರ್ದ ಸಹಕಾರಿ ಸಂಘದ ಚೊಚ್ಚಲ ಶಾಖೆಯು ಜ.15ರಂದು ಕಡಬ ಮುಖ್ಯ ರಸ್ತೆಯ ಭಾಗೀರಥಿ ಸಂಕೀರ್ಣದ ಮೊದಲ ಮಹಡಿಯಲ್ಲಿ ಶುಭಾರಂಭಗೊಳ್ಳಲಿದೆಯೆಂದು ಅಧ್ಯಕ್ಷ ದಾಮೋದರ ಕುಲಾಲ್ ಹಾಗೂ ಕಾರ‍್ಯದರ್ಶಿ ದಿನೇಶ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಸಹಕಾರಿ ಶಾಖೆಯ ಉದ್ಘಾಟನೆಯನ್ನು, ಕಡಬ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಪ್ರಕಾಶ್ ಅವರು ನೆರವೇರಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಕಡಬ ದುರ್ಗಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಕೆದಿಲಾಯ ನೆರವೇರಿಸಲಿರುವರು. ಭದ್ರತಾ ಕೊಠಡಿ ಉದ್ಘಾಟನೆಯನ್ನು ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ನೆರವೇರಿಸಲಿದ್ದು ಕಂಪ್ಯೂಟರ್ ವಿಭಾಗದ ಉದ್ಘಾಟನೆಯನ್ನು ಹಮೀದ್ ತಂಳ್ ಮರ್ದಾಳ ಕಡಬ ಮತ್ತು ಠೇವಣಿ ಪತ್ರ ಬಿಡುಗಡೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್ ಕಡಬ ಹಾಗೂ ಸಾಲಪತ್ರ ಬಿಡುಗಡೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿ ಕಡಬ ಇವರುಗಳು ನೆರವೇರಿಸಲಿದ್ದಾರೆ.
ಗೌರವ ಉಪಸ್ಥಿತರಾಗಿ ಕಡಬ ಭಾಗೀರಥಿ ಕಾಂಪ್ಲೆಕ್ಸ್ ಮಾಲಕ ದಯಾನಂದ ನಾಯ್ಕ್ ಭಾಗವಹಿಸಲಿದ್ದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಕಡಬ ಬಿಲ್ಲವ ಸಂಘದ ಅಧ್ಯಕ್ಷ ಸುಂದರ ಪೂಜಾರಿ, ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.