ಪುತ್ತೂರು: ಒಳಮೊಗ್ರು ಗ್ರಾಮದ ಕೊಯಿಲತ್ತಡ್ಕ- ಮಗಿರೆ ರಸ್ತೆಗೆ ಸುಮಾರು 10 ಲಕ್ಷ ರೂ ವೆಚ್ಚದಲ್ಲಿ ಕಾಂಕ್ರಿಟೀಕರಣ ಮಾಡಲಾಗಿದ್ದು ಈ ಭಾಗದ ಜನತೆಯ ಸುಮಾರು 50 ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.
ಕಳೆದ ಹಲವು ವರ್ಷಗಳಿಂದ ಈ ಭಾಗದ ಜನರು ರಸ್ತೆಗಾಗಿ ಸಂಭಂಧಿಸಿದವರಲ್ಲಿ ಮನವಿ ಮಾಡಿದ್ದರು.ವರ್ಷಗಳೂ ಉರಳಿದರು ಈ ಭಾಗದ ಜನರ ಕನಸ್ಸಾಗಿದ್ದ ಕಾಂಕ್ರೀಟ್ ರಸ್ತೆ ಕನಸ್ಸಾಗಿಯೇ ಉಳಿಯಿತೇ ಹೊರತು ನನಸಾಗಲಿಲ್ಲ. ರಾಜಕಾರಣಿಗಳ, ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ರಸ್ತೆ ನಿರ್ಮಾಣ ಮರಿಚಿಕೆಯಾಗಿತ್ತು.ಶಾಸಕ ಸಂಜೀವ ಮಠಂದೂರು ಅವರಲ್ಲಿ ಮತ್ತೊಮ್ಮೆ ಮನವಿ ಸಲ್ಲಿಸಿದ ಗ್ರಾಮಸ್ಥರು ರಸ್ತೆಗಾಗಿ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಯನ್ನು ಪುರಷ್ಕರಸಿದ ಶಾಸಕರು ನೀಡಿದ ಭರವಸೆಯಂತೆ ಅನುದಾನ ಬಿಡುಗಡೆ ಮಾಡಿದ್ದು ರಸ್ತೆ ಕಾಂಕ್ರೀಟಿಕರಣಗೊಂಡಿದೆ.
ಗ್ರಾಮಸ್ಥರ ಅಭಿನಂದನೆಗೆ ಪ್ರತಿಕ್ರಿಯಿಸಿರುವ ಶಾಸಕ ಸಂಜೀವ ಮಠಂದೂರು ಆಧ್ಯತೆಗೆ ತಕ್ಕಂತೆ ಪುತ್ತೂರು ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಗಳ ರಸ್ತೆಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಒಳಮೊಗ್ರು ಗ್ರಾಮದಲ್ಲಿ ಬಹುತೇಕ ಎಲ್ಲಾ ವಾರ್ಡಿನ ರಸ್ತೆಗಳಿಗೂ ಅನುದಾನ ನೀಡಲಾಗಿದೆ. ಹಳೆಯ ಬೇಡಿಕೆಗಳನ್ನು ಈಡೇರಿಸಲಾಗಿದೆ. ಅಭಿವೃದ್ದಿ ವಿಚಾರದಲ್ಲಿ ಜನರ ಬೇಡಿಕೆಯನ್ನು ಪರಿಗಣಿಸಿ ರಾಜಕೀಯ ರಹಿತವಾಗಿ ರಸ್ತೆ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ
ಸಂಜೀವ ಮಠಂದೂರು, ಶಾಸಕರು ಪುತ್ತೂರು
ಒಳಮೊಗ್ರು ಗ್ರಾಮದ ಬಹುತೇಕ ಎಲ್ಲಾ ಒಳರಸ್ತೆಗಳಿಗೆ ಶಾಸಕರು ಅನುದಾನವನ್ನು ಬಿಡುಗಡೆಮಾಡಿದ್ದಾರೆ, ಶೇ. 90 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿದೆ. ಗ್ರಾಮದಲ್ಲಿ ಎಲ್ಲೆಲ್ಲಿ ಏನೇನು ಬೇಡಿಕೆಗಳಿವೆ ಎಂಬುದನ್ನು ಪರಿಶೀಲಿಸಿ ಅದಕ್ಕೆ ತಕ್ಕಂತೆ ಅನುದಾನವನ್ನು ಶಾಸಕರು ಬಿಡುಗಡೆ ಮಾಡಿ ಗ್ರಾಮದ ಅಭಿವೃದ್ದಿಗೆ ಕಾರಣಿಕರ್ತರಾಗಿದ್ದಾರೆ. ಒಳಮೊಗ್ರು ಒಂದನೇ ವಾರ್ಡಿನ ಬೇಡಿಕೆಯೂ ಈ ಬಾರಿ ಈಡೇರಿಸಲಾಗಿದೆ.
ರಾಜೇಶ್ ರೈ ಪರ್ಪುಂಜ, ಒಳಮೊಗ್ರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರು