ಮಾಡಾವು  ಮಕರ ಸಂಕ್ರಾಂತಿ ಪ್ರಯುಕ್ತ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಕೆಯ್ಯೂರು: ಅಯ್ಯಪ್ಪ ಭಕ್ತ ವೃಂದ, ಅಯ್ಯಪ್ಪ ಭಜನಾ ಮಂದಿರ ಮಾಡಾವಿನಲ್ಲಿ  ಮಕರ ಸಂಕ್ರಾಂತಿ ಪ್ರಯುಕ್ತ 10ನೇ ವರ್ಷದ  ಶ್ರೀ ಕಟೀಲು ದುರ್ಗಾ ಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಸಂಪೂರ್ಣ ದೇವಿ ಮಹಾತ್ಮೆ  ಎಂಬ ಯಕ್ಷಗಾನ ಬಯಲಾಟವು ಜ:14 ರಂದು ನಡೆಯಿತು.

ಸಂಜೆ 5ಗಂಟೆಗೆ ಶ್ರೀ ಪವನಸುಮ ಕೆಯ್ಯೂರು ಭಜನಾ ತಂಡದಿಂದ  ಭಜನಾ ಕಾರ್ಯಕ್ರಮ ನಡೆದು, ಮಕರ ಸಂಕ್ರಾಂತಿಯ ಪ್ರಯುಕ್ತ ಅಯ್ಯಪ್ಪ ಸ್ವಾಮಿಗೆ ದೀಪಾರಧಣೆ ನಡೆಯಿತು.

ನಂತರ ಚೌಕಿ ಪೂಜೆ ನಡೆದು, ಪ್ರಸಾದ ವಿತರಣೆ ನಡೆಯಿತು.ನಂತರ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಅಯ್ಯಪ್ಪ ಭಕ್ತವೃಂದ ಅದ್ಯಕ್ಷ ಸುಬ್ರಾಯ ಗೌಡ ಮಾಡಾವು ಅಯ್ಯಪ್ಪ ಭಜನಾ ಮಂದಿರ ಮಾಡಾವು ಅದ್ಯಕ್ಷ ರವೀಂದ್ರ ರೈ ಬೊಳಿಕಲ ಮಠ , ಡಾ.ರಾಮಚಂದ್ರ ಭಟ್ ಮಾಡಾವು, ,ಕೃಷ್ಣ ಮೂರ್ತಿ ಭಟ್, ವಸಂತ ಪೂಜಾರಿ ನೆರೋಲ್ತಡ್ಕ, ವಸಂತ ರೈ ಮಡಾವು, ಪುರಂದರ ಬಲ್ಯಾಯ, ಜನಾರ್ದನ ನಾಯ್ಕ ಕಕ್ಕೇರ, ಸತೀಶ್ ಆಚಾರ್ಯ ಮಾಡಾವು, ಗುರುಕಿರಣ್ ಬೊಳಿಯಾಲ,  ಸಂದೀಪ್ ರೈ ಮಾಡಾವು, ಭಾಸ್ಕರ ರೈ ಮಠ, ರಾಕೇಶ್ ಗೌಡ ಬೊಳಿಕಲ, ರವೀಂದ್ರ ರೈ ನೆಲ್ಯಾಜೆ,  ಮೋಹನ ದೇವಾಡಿಗ ಮಾಡಾವು, ಕೇಶವ ಪರ್ತ್ಯಡ್ಕ,  ರಾಮಚಂದ್ರ ಆಚಾರ್ಯ ಮಾಡಾವು,ನಾಗೇಶ,    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ದೇರ್ಲ ಬಿ ಒಕ್ಕೂಟ, ಸಮಿತಿ ಸದಸ್ಯರು, ಗ್ರಾಮಸ್ಥರು, ಉಪಸ್ಥಿತರಿದ್ದರು, ರಾತ್ರಿ ಸುಡುಮದ್ದು ಪ್ರದರ್ಶನ ನಡೆಯಿತು.

LEAVE A REPLY

Please enter your comment!
Please enter your name here