ಆಲಂಕಾರು :ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸತ್ಯನಾರಾಯಣ ದೇವರ ಪೂಜೆ

0

ಆಲಂಕಾರು: ಸೀಮಾ ದೇವಸ್ಥಾನವಾದ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯಂದು ಜ.14 ರಂದು ಬೆಳಿಗ್ಗೆ ನಾಗತಂಬಿಲ,ದೈವಗಳಿಗೆ ತಂಬಿಲ ನಡೆದು ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ರಾತ್ರಿ ಶ್ರೀ ದೇವಿಗೆ ದೊಡ್ಡ ರಂಗಪೂಜೆ ಮಹಾಗಣಪತಿಗೆ ರಂಗಪೂಜೆ ,ಸಾರ್ವಜನಿಕ ಸತ್ಯನಾರಾಯಣ ದೇವರ ಪೂಜೆ ನಡೆಯಿತು.

ಆ ಬಳಿಕ ಬಲಿ ಹೊರಟು ಉತ್ಸವ, ಭಜನೆ, ಬಟ್ಟಲು ಕಾಣಿಕೆಯಾಗಿ ಮಹಾಪೂಜೆ ಯಾಗಿ ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು.ಈ ಸಂಧರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹಾಗು ಸದಸ್ಯರು ಹಾಗು ಭಕ್ತಾಧಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here