ಅಗಳಿ ದೇವಾಲಯದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಕಾಯಿಮಣ ಗ್ರಾಮದ ಅಗಳಿ ಶ್ರೀ ಸದಾಶಿವ ದೇವಾಲಯದ ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ಶ್ರವಣರಂಗ ಪ್ರತಿಷ್ಟಾನ ಸವಣೂರು ಇವರು ಆಯೋಜಿಸಿದ ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಕುಸುಮಾಕರ ಆಚಾರ್, ಆನಂದ ಸವಣೂರು, ಮದ್ದಳೆಗಾರರಾಗಿ ಮೋಹನ ಶರವೂರು, ಅಚ್ಯುತ ಭಕ್ತಕೋಡಿ ಸಹಕರಿಸಿದರು. ಮುಮ್ಮೇಳದಲ್ಲಿ ಬಲರಾಮನಾಗಿ ತಾರಾನಾಥ ಸವಣೂರು, ನಾರದನಾಗಿ ಅಚ್ಯುತ ಪಾಂಗಣ್ಣಾಯ, ಶ್ರೀ ಕೃಷ್ಷನಾಗಿ ನಾ.ಕಾರಂತ ಪೆರಾಜೆ, ಜಾಂಬವಂತನಾಗಿ ಗುಡ್ಡಪ್ಪ ಬಲ್ಯ ರವರು ಪಾತ್ರ ನಿರ್ವಹಿಸಿದರು.

LEAVE A REPLY

Please enter your comment!
Please enter your name here