30ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಆಮಂತ್ರಣ ಪತ್ರ ಬಿಡುಗಡೆ

0

24 ಗಂಟೆಯೊಳಗೆ ಕಂಬಳ ಮುಗಿಸಲು ಸಮಿತಿ ಸಭೆಯಲ್ಲಿ ನಿರ್ಣಯ

  • ಶತಮಾನಗಳ ಕಾಲ ವಿಜ್ರಂಭಣೆಯಿಂದ ಕಂಬಳ ನಡೆಯಲಿ-ಕೇಶವಪ್ರಸಾದ್ ಮುಳಿಯ
  • ವ್ಯವಸ್ಥಿತವಾಗಿ ಕಂಬಳ ನಡೆಯಬೇಕು-ಚಂದ್ರಹಾಸ ಶೆಟ್ಟಿ

ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ಜ.28 ಮತ್ತು 29ರಂದು ನಡೆಯಲಿರುವ ಪುರಾತನ ಜಾನಪದ ಕ್ರೀಡೆಯಾದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಜ.14ರಂದು ದೇವಳದ ರಾಜಗೋಪುರದ ಎದುರು ನಡೆಯಿತು. ಅದಕ್ಕೂ ಮುಂಚೆ ನಡೆದ ಕಂಬಳ ಸಮಿತಿ ಸಭೆಯಲ್ಲಿ, ಈ ಬಾರಿ ಕಂಬಳದಲ್ಲಿ ಸಮಯ ವ್ಯರ್ಥ ಮಾಡದೆ 24 ಗಂಟೆಯೊಳಗೆ ಕಂಬಳ ಸ್ಪರ್ಧೆ ಮುಗಿಸಬೇಕೆಂದು ನಿರ್ಣಯ ಕೈಗೊಳ್ಳಲಾಗಿದೆ. ಕೋಣಗಳನ್ನು ಕಂಬಳ ಕರೆಗೆ ಇಳಿಸುವ ಮೊದಲು ಕೋಣಗಳ ಯಜಮಾನರಿಗೆ ಈ ಬಗ್ಗೆ ಮಾಹಿತಿ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಇದರ ಜೊತೆಗೆ, ಇತ್ತೀಚೆಗೆ ಬೇರೆ ಕಡೆ ನಡೆದ ಕಂಬಳದಲ್ಲಿ ಲೇಸರ್ ತೀರ್ಪಿನ ಸಮಸ್ಯೆ ಎದುರಾಗಿದ್ದರಿಂದ, ಪುತ್ತೂರು ಕಂಬಳದಲ್ಲೂ ಈ ಸಮಸ್ಯೆ ಬಾರದಂತೆ ಎಚ್ಚರ ವಹಿಸುವ ಕಾರ್ಯ ಮಾಡಲೂ ಸಭೆಯಲ್ಲಿ ನಿರ್ಣಯಿಸಲಾಯಿತು.

ಆಮಂತ್ರಣ ಪತ್ರ ಬಿಡುಗಡೆ: ಸಂಜೆ ದೇವಳದ ಸತ್ಯಧರ್ಮ ನಡೆಯಲ್ಲಿ ಕಂಬಳದ ಆಮಂತ್ರಣ ಪತ್ರವನ್ನು ಇಟ್ಟು ವಿಶೇಷ ಪ್ರಾರ್ಥನೆ ಮಾಡಲಾಯಿತು.ದೇವಳದ ಪ್ರಧಾನ ಅರ್ಚಕ ವೇ.ಮೂ ವಿ.ಎಸ್ ಭಟ್ ಪ್ರಾರ್ಥನೆ ಮಾಡಿ ಕಂಬಳ ಸಮಿತಿಗೆ ಪ್ರಸಾದ ವಿತರಿಸಿದರು.ಬಳಿಕ ದೇವರ ರಾಜಗೋಪುರದಲ್ಲಿ ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.

ಶತಮಾನಗಳ ಕಾಲ ವಿಜ್ರಂಭಣೆಯಿಂದ ಕಂಬಳ ನಡೆಯಲಿ : ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಈ ಬಾರಿಯ ಕಂಬಳಕ್ಕೆ ಇನ್ನು ಹೆಚ್ಚು ದಿನವಿಲ್ಲ. ಇಂತಹ ಸಂದರ್ಭದಲ್ಲಿ ಅತ್ಯಂತ ಯಶಸ್ವಿಯಾಗಿ ಕಂಬಳ ನಡೆಯಲು ಮಹಾಲಿಂಗೇಶ್ವರನ ಅನುಗ್ರಹ ಇರಲಿ, ಶತಮಾನಗಳ ಕಾಲ ವಿಜ್ರಂಭಣೆಯಿಂದ ಕಂಬಳ ನಡೆಯಲಿ ಎಂದು ಹಾರೈಸಿದರು.

ವ್ಯವಸ್ಥಿತವಾಗಿ ಕಂಬಳ ನಡೆಯಬೇಕು: ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವ ಪುತ್ತೂರು ಜೋಡುಕರೆ ಕಂಬಳದಲ್ಲಿ ಸಮಿತಿಯಲ್ಲಿ ಚರ್ಚಿಸಿದಂತೆ ಕೆಲವೊಂದು ನಿರ್ಣಯ ಕೈಗೊಳ್ಳುವ ಚಿಂತನೆ ಇದೆ. 24 ಗಂಟೆಯೊಳಗೆ ಕಂಬಳ ಮುಗಿಯಬೇಕು. ಪ್ರತಿ ಕಂಬಳದ ಸಂದರ್ಭದಲ್ಲಿ ಕರೆಗೆ ಇಳಿಸುವ ಸಂದರ್ಭ ಗೊಂದಲ ಆಗದಂತೆ ವ್ಯವಸ್ಥೆ ಮಾಡುವುದು ಸೇರಿದಂತೆ ಬೇರೆ ಬೇರೆ ವಿಚಾರದಲ್ಲಿ ನಿರ್ಣಯ ಕೈಗೊಂಡಿದ್ದು,ಇದನ್ನು ಕಾರ್ಯಗತಗೊಳಿಸುವ ಚಿಂತನೆ ಮಾಡಲಾಗುವುದು.ಕೋಣಗಳ ಯಜಮಾನರಿಗೆ ಈ ಕುರಿತು ಮಾಹಿತಿ ನೀಡಲಾಗುವುದು ಎಂದರು.

ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಕಂಬಳ ಸಮಿತಿ ಪ್ರಧಾನ ತೀರ್ಪುಗಾರ ರಾಜೀವ ಶೆಟ್ಟಿ ಎಡ್ತೂರು, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಸಂಚಾಲಕ ಎನ್.ಸುಧಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ್ ಪಿ.ವಿ., ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷರಾದ ಶಿವರಾಮ ಆಳ್ವ ಕುರಿಯ, ವಸಂತ್ ಕುಮಾರ್ ರೈ ಜೆ.ಕೆ., ಪ್ರವೀಣ್‌ಚಂದ್ರ ಆಳ್ವ, ಜಿನ್ನಪ್ಪ ಪೂಜಾರಿ ಮುರ, ಜೋಕಿಂ ಡಿಸೋಜ, ರೋಶನ್ ರೈ ಬನ್ನೂರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶೇಖರ ನಾರಾವಿ, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ., ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಂಬಳ ಸಮಿತಿ ಪದಾಧಿಕಾರಿಗಳಾದ ಪ್ರೇಮಾನಂದ ನಾಯ್ಕ್, ಸುದೇಶ್ ಕುಮಾರ್, ಯೋಗೀಶ್ ಸಾಮಾನಿ, ಭಾಗ್ಯೇಶ್ ರೈ ಕೆಯ್ಯೂರು, ಸುದರ್ಶನ್ ನಾಯ್ಕ್ ಕಂಪ, ವಿಕ್ರಂ ಶೆಟ್ಟಿ ಅಂತರ, ಕೃಷ್ಣಪ್ರಸಾದ್ ಆಳ್ವ, ಮಂಜುನಾಥ ಗೌಡ ತೆಂಕಿಲ, ಸಂತೋಷ್ ಸವಣೂರು, ರಾಮಚಂದ್ರ ನಾಯಕ್, ಲೋಕೇಶ್ ಪಡ್ಡಾಯೂರು, ಗಣೇಶ್‌ರಾಜ್ ಬಿಳಿಯೂರು, ಜಯಂತ ಸಿಟಿಗುಡ್ಡೆ, ಅಶೋಕ್ ರೈ, ಶಶಿಕಿರಣ್ ರೈ ನೂಜಿ ಬೈಲು, ಮುರಳೀಧರ್ ರೈ ಮಠಂತಬೆಟ್ಟು, ಗಂಗಾಧರ ಶೆಟ್ಟಿ ಕೈಕಾರ, ನವೀನ್ ನಾ‌ಯ್ಕ್ ಬೆದ್ರಾಳ, ಐತ್ತಪ್ಪ ನಾಯ್ಕ್, ರವೀಂದ್ರ ಶೆಟ್ಟಿ, ಕೃಷ್ಣ ನಾಯ್ಕ್, ರಮೇಶ್ ನೆಲ್ಲಿಕಟ್ಟೆ, ವಿಲ್ಪ್ರೇಡ್ ಫೆರ್ನಾಂಡಿಸ್, ರಮೇಶ್ ಪೂಜಾರಿ, ಶಶಿಕುಮಾರ್ ನೆಲ್ಲಿಕಟ್ಟೆ, ಖಾದರ್ ಪೋಳ್ಯ, ಪ್ರಶಾಂತ್ ಮುರ, ಹಸೈನಾರ್ ಬನಾರಿ, ಸುಂದರ ಪೂಜಾರಿ, ದಾಮೋದರ್ ಮುರ, ರಾಜೇಶ್ ಶೆಟ್ಟಿ ಎಡ್ತೂರು, ಚಂದ್ರಹಾಸ ಶೆಟ್ಟಿ ಬನ್ನೂರು, ಅಶ್ವತ್ಥ್, ಪ್ರಕಾಶ್ ಶೆಟ್ಟಿ, ರಾಧಾಕೃಷ್ಣ ನಾಯ್ಕ್, ಉಮಾಶಂಕರ್, ಪ್ರವೀಣ್ ಕುಮಾರ್ ಅಳಕೆಮಜಲು, ಸತೀಶ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಕೋಣಗಳ ಮಾಲಕರಿಗೆ, ರಕ್ಷಕರಿಗೆ, ಓಟಗಾರಿಗೆ ಮಾಹಿತಿ‌

ಕಂಬಳ 24 ಗಂಟೆಯೊಳಗೆ ಮುಗಿಸಬೇಕೆಂದು ಸಮಿತಿ ಸಭೆಯಲ್ಲಿ ಆದ ನಿರ್ಣಯ. ಇದನ್ನು ಕಂಬಳ ಕೋಣಗಳ ಮಾಲಕರಿಗೆ ತಿಳಿಸುವ ಕೆಲಸ ಆಗಲಿದೆ. ಕಂಬಳದಲ್ಲಿ ಕೋಣಗಳು ಬರುವ ಹಂತದಲ್ಲಿ ಈ ವಿಚಾರವನ್ನು ತೀರ್ಪುಗಾರರಿಗೆ, ಪ್ರಧಾನ ತೀರ್ಪುಗಾರರಿಗೆ ಮುಟ್ಟಿಸುವ ಕೆಲಸ ಆಗುತ್ತದೆ. ಕೋಣಗಳು ಕರೆಗೆ ಇಳಿಯುವ ಸಂದರ್ಭ ಮಾಲಕರಿಗೆ, ರಕ್ಷಕರಿಗೆ, ಓಟಗಾರರಿಗೆ ಬೇರೆ ಬೇರೆ ಸಂಘಟಕರಿಗೆ ಮಾಹಿತಿ ನೀಡಲಾಗುವುದು. ಯಾಕೆಂದರೆ ಇತ್ತೀಚಿಗಿನ ದಿನಗಳಲ್ಲಿ ಕಂಬಳ ವ್ಯವಸ್ಥಿತವಾಗಿ ಆಗುವ ರೀತಿಯಲ್ಲಿ ಕಾಣುತ್ತಿಲ್ಲ. ಅದನ್ನು ಸರಿ ಮಾಡಬೇಕು. ಗಂತು, ಮಂಜೋಟಿ ಬೇರೆ ಬೇರೆ ಕರೆಗಳಲ್ಲಿ ಯಾವ ಯಾವ ರೀತಿಯಲ್ಲಿ ಕೋಣಗಳು ಭಾಗವಹಿಸಬೇಕು.ಯಾವ ರೀತಿ ತಯಾರಾಗಬೇಕು.ಎಲ್ಲಿ ತಡ ಆಗುತ್ತಿದೆ ಎಂಬುದನ್ನು ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಇವೆಲ್ಲವನ್ನು ಆಲೋಚಿಸಿ ಮುಂದೆ ಕಂಬಳದ ಕೋಣಗಳ ಮಾಲಕರಿಗೆ ಮಾಹಿತಿ ನೀಡುವ ಕೆಲಸ ಆಗುತ್ತದೆ. ಇದಕ್ಕೆ ಕೋಣಗಳ ಮಾಲಕರು ಸ್ಪಂದಿಸುತ್ತಾರೆಂಬ ಭರವಸೆ ಇದೆ.ಅದೇ ರೀತಿ ಪುತ್ತೂರಿನ ಕಂಬಳದಲ್ಲಿ ಲೇಸರ್ ತೀರ್ಪು ಬಳಲಾಗುತ್ತದೆ.ಇಲ್ಲಿ ಯಾವ ಬದಲಾವಣೆ ಇಲ್ಲ.

ನಿರಂಜನ ರೈ ಮಠಂತಬೆಟ್ಟು, ಕೋಟಿ ಚೆನ್ನಯ ಕಂಬಳದ ತೀರ್ಪುಗಾರ

LEAVE A REPLY

Please enter your comment!
Please enter your name here