ಪುತ್ತೂರು: ತೆಂಕಿಲ ಕಟ್ಟತ್ತಾರು ನಿವಾಸಿ ಉಮೇಶ್ ನಾಯ್ಕ್(63ವ) ರವರು ಅನಾರೋಗ್ಯದಿಂದಾಗಿ ಜ.15ರಂದು ರಾತ್ರಿ ನಿಧನರಾದರು.
ಪುತ್ತೂರು ಎ.ಸಿ.ಕಚೇರಿಯ ಹಳೆಯ ಕಟ್ಟಡದ ಬಳಿ ಪುತ್ತೂರು ಯೂತ್ ಕ್ಲಬ್ ಕಟ್ಟಡವೊಂದರಲ್ಲಿ ಗಂಜಿ ಊಟದ ಕ್ಯಾಂಟೀನ್ ನಡೆಸುತ್ತಿದ್ದ ಅವರು ಮಿನಿ ವಿಧಾನ ಸೌಧ ನಿರ್ಮಾಣವಾಗುವ ಸಂದರ್ಭ ಕ್ಯಾಂಟಿನ್ ತೆರವು ಮಾಡಿದ ಅವರು ಪಶು ಇಲಾಖೆಯ ಬಳಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದರು.
ಮೃತರು ಪತ್ನಿ ಮೀನಾಕ್ಷಿ, ಪುತ್ರ ಪ್ರಜ್ವಲ್, ಪುತ್ರಿ ಸುರಕ್ಷಾ, ಅಳಿಯ ಗಣೇಶ್ ಪರೆಕ್ಕಿಲ, ಮೊಮ್ಮಗಳು ಮತ್ತು ಸಹೋದರ ಸಹೋದರಿಯರನ್ನು ಅಗಲಿದ್ದಾರೆ.