ಬಾಯಂಬಾಡಿ ಷಣ್ಮುಖ ದೇವ ದೇವಸ್ಥಾನಕ್ಕೆ ನೂತನ ರಥ ಆಗಮನ

0

ಪುತ್ತೂರು: ಕೊಳ್ತಿಗೆ ಗ್ರಾಮದ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನಕ್ಕೆ ನೂತನವಾಗಿ ಸಮರ್ಪಣೆಯಾಗಲಿರುವ ರಥವು ಜ.15ರಂದು ಸಂಜೆ ಅದ್ಧೂರಿ ಮೆರವಣಿಗೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿತು.


ಕಾರ್ಕಳದಲ್ಲಿ ನಿರ್ಮಾಣಗೊಂಡ ನೂತನ ರಥಕ್ಕೆ ಅಪರಾಹ್ನ ಕಾವು ಅಮ್ಚಿನಡ್ಕದಲ್ಲಿ ಸ್ವಾಗತಿಸಲಾಯಿತು. ಬಳಿಕ ವಾಹನ ಮೆರವಣಿಗೆಯ ಮೂಲಕ ಪೆರ್ಲಂಪಾಡಿಗೆ ಆಗಮಿಸಿತು. ನಂತರ ಅದ್ಧೂರಿ ಕಾಲ್ನಡಿಗೆ ಮೆರವಣಿಗೆಯಲ್ಲಿ ರಥವು ದೇವಸ್ಥಾನಕ್ಕೆ ಸಾಗಿ ಬಂದಿದೆ. ಆಕರ್ಷಕ ಬೊಂಬೆ ಕುಣಿತ, ನಾಸಿಕ್ ಬ್ಯಾಂಡ್, ಕೀಳು ಕುದುರೆ, ಸಿಂಗಾರಿ ಮೇಳ, ಭಜನೆ, ಕುಣಿತ ಭಜನೆ, ಪೂರ್ಣಕುಂಭ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು. ಮೆರವಣಿಗೆಯಲ್ಲಿ ಅಲ್ಲಲ್ಲಿ ಪಾನೀಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.

ಜ.21ರಂದು ರಥ ಸಮರ್ಪಣೆ:

ದೇವರಿಗೆ ನೂತನ ರಥವು ವರ್ಷಾವಧಿ ಜಾತ್ರೋತ್ಸವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜ.21ರಂದು ಸಮರ್ಪಣೆಯಾಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೇಮಿರಾಜ್ ಪಾಂಬಾರ್, ಸದಸ್ಯರಾದ ಕೆ.ಆರ್ ಲಕ್ಷ್ಮಣ ಗೌಡ ಕುಂಟಿಕಾನ, ಮುರಳಿಕೃಷ್ಣ ಸಿದ್ದಮೂಲೆ, ಸುಧೀರ್ ಕಟ್ಟಪುಣಿ, ಪುಷ್ಪರಾಜ ರೈ ಕೆ ಕಲಾಯಿ, ನಾರಾಯಣ ನಾಯ್ಕ ಮಾಲೆತ್ತೋಡಿ, ಯಶೋಧ ಜಿ.ಭಟ್ ಎಕ್ಕಡ್ಕ, ಸರೋಜಿನಿ ಎಂ ಮೇರಡ್ಕ, ಉತ್ಸವ ಸಮಿತಿ ಅಧ್ಯಕ್ಷ ತೀರ್ಥಾನಂದ ದುಗ್ಗಳ, ಕೊಳ್ತಿಗೆ ಗ್ರಾ.ಪಂ ಅಧ್ಯಕ್ಷ ಶ್ಯಾಮಸುಂದರ ರೈ ಕೆರೆಮೂಲೆ, ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಸಂತ ಕುಮಾರ್ ರೈ ದುಗ್ಗಳ, ವಿವಿಧ ಉಪ ಸಮಿತಿಗಳು ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳ್ತಿಗೆ, ಕೊಳ್ತಿಗೆ ಯುವಕ ಮಂಡಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಳ್ತಿಗೆ ಒಕ್ಕೂಟ, ನವೋದಯ ಸ್ವಸಹಾಯ ಸಂಘಗಳ ಒಕ್ಕೂಟ, ಆದಿಶಕ್ತಿ ಮಹಿಳಾ ಮಂಡಲ ಕೊಳ್ತಿಗೆ, ಶ್ರೀ ಷಣ್ಮುಖ ಭಜನ ಮಂಡಳಿ ಹಾಗೂ ಯಕ್ಷಗಾನ ಕಲಾಕೂಟ, ರೈತಮಿತ್ರ ಕೂಟ ಕೊಳ್ತಿಗೆ, ಹಿಂದೂ ಜಾಗರಣಾ ವೇದಿಕೆ, ಚೈತನ್ಯ ಅಭಿವ್ಯಕ್ತಿ ವೇದಿಕೆ, ಸ್ತ್ರೀಶಕ್ತಿ ಮಹಿಳಾ ಸಂಘ, ಓಂ.ಫ್ರೆಂಡ್ಸ್, ಸಿದ್ದಿ ವಿನಾಯಕ ಕಲಾ ಸಂಘ ಮಾಲೆತ್ತೋಡಿ, ಸುಂದರ ಯಕ್ಷಕಲಾ ವೇದಿಕೆ, ಮಧುರ ಹಳೆ ವಿದ್ಯಾರ್ಥಿ ಸಂಘ ಸಬ್ಬಡ್ಕ, ಶಿವಾಜಿ ಫ್ರೆಂಡ್ಸ್ ಮಾಲೆತ್ತೋಡಿ ಹಾಗೂ ಆದಿಶಕ್ತಿ ಮಹಮ್ಮಾಯಿ ಭಜನಾ ತಂಡ ಕಲಾಯಿ ಇದರ ಪದಾಧಿಕಾರಿಗಳು ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here