ಪುತ್ತೂರಿಗೆ ಬಂದಿದೆ ಮತ್ತೊಂದು ಪರಿಸರ ಪ್ರೇಮಿ ಇಲೆಕ್ಟ್ರಿಕ್ ಸ್ಕೂಟರ್ ಮಳಿಗೆ; ‘ಏಥರ್’ ಇಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಶುಭಾರಂಭ

0

ಪುತ್ತೂರು: ಇಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆಯಲ್ಲಿಯೇ ಅಗ್ರಸ್ಥಾನದಲ್ಲಿರುವ ’ಏಥರ್’ ಇಲೆಕ್ಟ್ರಿಕ್ ಸ್ಕೂಟರ್ ಶೋರೂಂ ಜ.16ರಂದು ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಅನಿತಾ ಆಯಿಲ್ ಮಿಲ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.‌

ಯುವ ಸಮುದಾಯವನ್ನು ಆಕರ್ಷಿಸುವ ನಿಟ್ಟಿನಲ್ಲಿ ಆಕರ್ಷಕ ವಿನ್ಯಾಸದಲ್ಲಿ ಏಥರ್ ಸ್ಕೂಟರ್‌ಗಳನ್ನು ತಯಾರಿಸಲಾಗಿದೆ. ಅಷ್ಟೇ ಅಲ್ಲದೇ ಇದು ಬೈಕ್ ರೈಡರ್‌ಗಳಿಗೆ ಸ್ಪೋರ್ಟಿ ಲುಕ್‌ನ್ನು ನೀಡಲಿದೆ. ಆಕರ್ಷಕ 4 ಬಣ್ಣಗಳಲ್ಲಿ ಲಭ್ಯವಿದೆ. 450 ಹಾಗೂ 450 ಪ್ಲಸ್ ಎರಡು ಮಾದರಿಯಲ್ಲಿ ವಾಹನಗಳು ಲಭ್ಯವಿದೆ.

ಉತ್ತಮ ಮೈಲೇಜ್: ಏಥರ್ ಕೇವಲ ನೋಡಲು ಮಾತ್ರ ಆಕರ್ಷಿತವಾಗಿರುವುದು ಮಾತ್ರವಲ್ಲದೇ ಉತ್ತಮ ಮೈಲೇಜ್ ನೀಡುವಲ್ಲೂ ಕೂಡ ಮುಂಚೂಣಿಯಲ್ಲಿದೆ. ತನ್ನ ಎಲೆಕ್ಟ್ರಕ್ ಚಾರ್ಜಿಂಗ್ ಮೂಲಕ ಇದು ಕೇವಲ 3.9 ಸೆಕೆಂಡುಗಳಲ್ಲಿ 0 ಯಿಂದ 40 ಕೆಎಂಪಿಹೆಚ್‌ನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 107 ಕಿ.ಮೀ ಮೈಲೇಜ್ ನೀಡುತ್ತದೆ. ಉನ್ನತ ಗುಣಮಟ್ಟದ ಲೀಥಿಯಂ ಐಯನ್ ಬ್ಯಾಟರಿ ಪ್ಯಾಕ್‌ನ್ನೊಳಗೊಂಡ ಏಥರ್ 2.4 ಕಿಲೋವ್ಯಾಟ್ ಹೆಚ್ಚಿನ ಸಾಮರ್ಥ್ಯವನ್ನು, ಬೇಗ ಚಾರ್ಜ್ ಆಗುವಂತಹ ಸಾಮರ್ಥ್ಯವನ್ನು ನೀಡುತ್ತದೆ ಜೊತೆಗೆ ನೀರು ಮತ್ತು ಧೂಳಿನಿಂದ ಸುರಕ್ಷತೆಯನ್ನು ಹೊಂದಿರುವ ಈ ಬ್ಯಾಟರಿಯು ಬರೋಬ್ಬರಿ 5 ವರ್ಷಗಳ ವಾರಂಟಿ ಹಾಗೂ ಮೋಟಾರ್‌ಗೆ 3 ವರ್ಷಗಳ ವಾರಂಟಿಯನ್ನು ನೀಡುತ್ತಿದೆ.

ಬಹುಬೇಗ ಚಾರ್ಜ್: ಹೋಮ್ ಸಾಕೆಟ್‌ಗಳಿಂದಲೂ ಇದನ್ನು ಚಾರ್ಜ್ ಮಾಡಬಹುದಾಗಿದೆ. ಪ್ರಯಾಣಿಸುತ್ತಿರುವಾಗಲೇ ಚಾರ್ಜ್ ಖಾಲಿಯಾದರೆ ನೀವು ಚಾರ್ಜಿಂಗ್ ಕೇಬಲ್‌ಗಳನ್ನು ಉಪಯೋಗಿಸಿಕೊಂಡು 5ಎ ಸಾಕೆಟ್‌ನಿಂದ ಚಾರ್ಜ್ ಮಾಡಿಕೊಳ್ಳಬಹುದು. ಏಥರ್‌ನಲ್ಲಿ ಬೇಗ ಚಾರ್ಜ್ ಆಗುವಂತಹ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಹಾಗೂ ಇದು ನಿಮಿಷದಲ್ಲಿ ಶೇ.80ರಷ್ಟು ಚಾರ್ಜ್ ಆಗಬಹುದು. ಇದು ಕೇವಲ 3.9 ಸೆಕೆಂಡುಗಳಲ್ಲಿ 0 ಯಿಂದ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ.

ಡಿಜಿಟಲ್ ತಂತ್ರಜ್ಞಾನ: ಏಥರ್ ಸ್ಕೂಟರ್ ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದೆ ಹಾಗೂ ಇದು ಬಹುಮಾಹಿತಿಯನ್ನು ನೀಡಬಲ್ಲ ಟಚ್‌ಸ್ಕ್ರೀನ್, ವೆಹಿಕಲ್ ಟ್ರ್ಯಾಕಿಂಗ್, ವೆಹಿಕಲ್ ಡಯಾಗ್ನೋಸ್ಟಿಕ್ಸ್, ಮಲ್ಟಿಪಲ್ ರೈಡಿಂಗ್ ಮೋಡ್ಸ್, ಚಾರ್ಜಿಂಗ್ ಲೊಕೇಶನ್ ಮತ್ತು ಜಿಪಿಎಸ್ ನ್ಯಾವಿಗೇಷನ್‌ಗಳೊಂದಿಗೆ ಇನ್ನೂ ಹತ್ತು ಹಲವಾರು ಉನ್ನತ ಗುಣಮಟ್ಟದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಬ್ಲೂಟೂತ್ ಮೂಲಕ ಮೊಬೈಲ್ ಕರೆ ಬಂದಾಗ ಡಿಜಿಟಲ್ ಡಿಸ್‌ಪ್ಲೆಯಲ್ಲಿ ಕರೆ ಸ್ವೀಕರಿಸುವುದು, ಎಂಪಿ3 ಹಾಡುಗಳನ್ನು ಆಪರೇಟ್ ಮಾಡುವ ಸಿಸ್ಟಮ್‌ಗಳನ್ನು ಒಳಗೊಂಡಿದೆ.

ಚಾಲನೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯನ್ನು ರೈಡರ್‌ಗಳು ಪಡೆಯಲು ಯಾವುದೇ ಮೋಡ್‌ನಲ್ಲಿ ಇಟ್ಟು ಚಲಿಸಿದರೂ ಕೂಡ ಇದು ಒಂದೇ ಸಮನಾದ ಕಾರ್ಯದಕ್ಷತೆಯನ್ನು ನೀಡಲಿದೆ. ಇಕೋ ಮೋಡ್‌ನಲ್ಲಿಟ್ಟು ಪ್ರಯಾಣಿಸಿದಾಗ 75 ಕಿಲೋಮೀಟರ್ ವೇಗವನ್ನು, ರೈಡ್ ಮೋಡ್‌ನಲ್ಲಿ 65 ಕಿಲೋಮೀಟರ್ ವೇಗವನ್ನು ಹಾಗೂ ಸ್ಪೋರ್ಟ್ ಮೋಡ್‌ನಲ್ಲಿ 55 ಕಿಲೋಮೀಟರ್ ವೇಗವನ್ನು ರೈಡರ್‌ಗಳಿಗೆ ನೀಡಲಿದೆ. ಈ ವಾಹನದಲ್ಲಿ ಸೆನ್ಸಾರ್ ಸಿಸ್ಟಮ್ ಅಳವಡಿಸಲಾಗಿದೆ. ಎರಡೂ ಚಕ್ರಗಳೂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಈ ವಾಹನ ಪ್ರದರ್ಶನ ಹಾಗೂ ಟೆಸ್ಟ್ ಡ್ರೈವ್‌ಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಪ್ರಪ್ರಥಮ ಗೂಗಲ್ ಮ್ಯಾಪ್…!

ಏಥರ್ ಸ್ಕೂಟರ್‌ನಲ್ಲಿ ಗೂಗಲ್ ಮ್ಯಾಪ್ ಸಿಸ್ಟಮ್ ಹೊಂದಿದ್ದು ಇದು ಜಗತ್ತಿನಲ್ಲೇ ಪ್ರಥಮವಾಗಿದೆ. ಮೊಬೈಲ್ ಮಾದರಿಯಲ್ಲಿಯೇ ಎಲ್ಲಾ ರೀತಿಯಲ್ಲಿ ಗೂಗಲ್ ಮ್ಯಾಪ್‌ನ್ನು ಬಳಸಿಕೊಂಡು ಸಂಚರಿಸಲು ಅವಕಾಶವಿದೆ. ವಾಟರ್ ಪ್ರೂಫ್ ಡಿಸ್‌ಪ್ಲೆಯನ್ನು ಹೊಂದಿದ್ದು ನೀರು ಬಿದ್ದರೂ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here