Saturday, February 4, 2023
Homeಗ್ರಾಮವಾರು ಸುದ್ದಿಪುಣಚ ಗ್ರಾ.ಪಂ. ಪಿಡಿಓ ರವಿ ಅಧಿಕಾರ ಸ್ವೀಕಾರ

ಪುಣಚ ಗ್ರಾ.ಪಂ. ಪಿಡಿಓ ರವಿ ಅಧಿಕಾರ ಸ್ವೀಕಾರ

ಪುತ್ತೂರು : ಪುಣಚ ಗ್ರಾಮ ಪಂಚಾಯಿತಿನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ರವಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಇವರು ಮಾಣಿಲ ಗ್ರಾಮ ಪಂಚಾಯಿತಿನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದರು. ಪ್ರಸ್ತುತ ಕರೋಪಾಡಿ ಮತ್ತು ಪುಣಚ ಗ್ರಾಮ ಪಂಚಾಯತಿನಲ್ಲಿ ಪ್ರಭಾರ ಅಭಿವೃದ್ಧಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಈ ಹಿಂದೆ ಹಾಸನದಲ್ಲಿ ನ್ಯಾಯಾಂಗ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ, ಬೆಳ್ತಂಗಡಿ ಪರ್ಲಾಣಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೂಲತಃ ಕುಂದಾಪುರ ನಿವಾಸಿಯಾಗಿದ್ದು ಪ್ರಸ್ತುತ ವಿಟ್ಲದಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here

Must Read

spot_img
error: Content is protected !!