ಅಖಿಲ ಭಾರತ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ; ಸೆಮಿಫೈನಲ್‌ನ ಪ್ರಥಮ ಲೀಗ್‌ನಲ್ಲಿ ಆಂಧ್ರ ಯುನಿವರ್ಸಿಟಿಯನ್ನು ಮಣಿಸಿದ ಮಂಗಳೂರು ವಿವಿ

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಮೂರನೇ ದಿನದಂದು ಮಂಗಳೂರು ವಿವಿಯು ಮಹತ್ವದ ಮೇಲುಗೈ ಸಾಧಿಸಿದ್ದು, ಕ್ವಾಟರ್ ಫೈನಲ್‌ನಲ್ಲಿ ಅಣ್ಣಾಮಲೈ ವಿವಿಯನ್ನು ಮಣಿಸಿ ಸೆಮಿ-ಫೈನಲ್‌ನ ಪ್ರಥಮ ಲೀಗ್ ಪ್ರವೇಶಿಸಿದ ಮಂಗಳೂರು ವಿವಿಯು ಅಲ್ಲಿ ಆಂಧ್ರ ಯುನಿವರ್ಸಿಟಿ ತಂಡವನ್ನು ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ.

ಬೆಳಗ್ಗೆ ಆರಂಭವಾದ ಫ್ರೀ ಕ್ವಾಟರ್ ಫೈನಲ್ ಪಂದ್ಯಾಟದಲ್ಲಿ ಅಣ್ಣಾ ಯುನಿವರ್ಸಿಟಿಯು ಕೇರಳ ಯುನಿವರ್ಸಿಟಿಯನ್ನು 32-35, 35-24, 35-23ರಲ್ಲಿ ಮಣಿಸಿತು. ಅಣ್ಣಾಮಲೈ ಯುನಿವರ್ಸಿಟಿಯು ಆಚಾರ್ಯ ನಾಗಾರ್ಜುನ ಯುನಿವರ್ಸಿಟಿಯನ್ನು 35-28, 35-17, ಮದ್ರಾಸ್ ಯುನಿವರ್ಸಿಟಿಯು ಭಾರತಿದಾಸ್ ಯುನಿವರ್ಸಿಟಿಯನ್ನು 35-28, 27-35, 35-30 ಹಾಗೂ ಭಾರತೀಯರ್ ಯುನಿವರ್ಸಿಟಿಯು ಪೆರಿಯಾರ್ ಯುನಿವರ್ಸಿಟಿಯನ್ನು 35-26, 35-29 ಅಂಕಗಳಿಂದ ಮಣಿಸಿ ಕ್ವಾಟರ್ ಫೈನಲ್ ಪ್ರವೇಶಿಸಿತು.

ಕ್ವಾಟರ್ ಫೈನಲ್ ಪಂದ್ಯದಲ್ಲಿ ಅಣ್ಣಾಮಲೈ ಯುನಿವರ್ಸಿಟಿಯು ಬಿ.ಎಸ್. ಅಬ್ದರ‍್ರಹ್ಮಾನ್ ಕ್ರೆಸೆಂಟ್ ಯುನಿವರ್ಸಿಟಿಯನ್ನು 35-28, 32-35, 35-19, ಮಂಗಳೂರು ಯುನಿವರ್ಸಿಟಿಯು ಅಣ್ಣಾಮಲೈ ಯುನಿವರ್ಸಿಟಿಯ ತಂಡವನ್ನು 35-21, 35-30 ಅಂಕಗಳಿಂದ ಮಣಿಸಿ ಲೀಗ್ ಪ್ರವೇಶಿಸಿದವು. ಆಂಧ್ರ ಯುನಿವರ್ಸಿಟಿಯು ಯುನಿವರ್ಸಿಟಿ ಆಫ್ ಮದ್ರಾಸ್ ತಂಡವನ್ನು 20-35, 35-29, 35-21, ಎಸ್‌ಆರ್‌ಎಂ ಇನ್ಸ್ಟಿಟ್ಯೂಷನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ತಂಡವು ಭಾರತೀಯರ್ ಯುನಿವರ್ಸಿಟಿ ತಂಡವನ್ನು 37-35, 35-19 ಅಂಕಗಳಿದ ಮಣಿಸಿ ಸೆಮಿ-ಫೈನಲ್‌ನ ಪ್ರಥಮ ಲೀಗ್ ಪ್ರವೇಶಿಸಿದವು.

ಸೆಮಿ-ಫೈನಲ್‌ನ ಪ್ರಥಮ ಲೀಗ್ ಪಂದ್ಯಾಟದಲ್ಲಿ ಎಸ್‌ಆರ್‌ಎಂ ಇನ್ಸ್ಟಿಟ್ಯೂಷನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ತಂಡವು ಅಣ್ಣಾಮಲೈ ಯುನಿವರ್ಸಿಟಿ ತಂಡವನ್ನು 35-15, 35-27 ಅಂಕಗಳಿಂದ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ತಂಡವು ಆಂಧ್ರ ಯುನಿವರ್ಸಿಟಿ ತಂಡವನ್ನು 35-29, 35-25 ಅಂಕಗಳಿಂದ ಮಣಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿದೆ.

LEAVE A REPLY

Please enter your comment!
Please enter your name here