ಭಜನೆಯ ಆನಂದವನ್ನು ವರ್ಣಿಸಲಸಾಧ್ಯ: ರಾಮಕೃಷ್ಣ ಕಾಟುಕುಕ್ಕೆ

0

ಉಪ್ಪಿನಂಗಡಿ: ಭಗವಂತನಲ್ಲಿ ಶರಣಾಗತರಾಗಿ ಭಗವಂತನ ನಾಮ ಸಂಕೀರ್ತನೆ ಮಾಡುವುದರಿಂದ ದೊರಕುವ ಆನಂದವನ್ನು ಸಾಕ್ಷಾತ್ ಅನುಭವಿಸಬಹುದೇ ವಿನಹ ವರ್ಣಿಸಲಸಾಧ್ಯ ಎಂದು ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ತಿಳಿಸಿದರು.

ಉಪ್ಪಿನಂಗಡಿಯ ಶ್ರೀ ಶಾರದಾ ವನಿತಾ ಭಜನಾ ಮಂಡಳಿ ರಾಮನಗರ ಇದರ ದಶ ಮಾನೋತ್ಸವದ ಹಿನ್ನೆಲೆಯಲ್ಲಿ ನಡೆದ ದಶ ಗೃಹ ಸಂಕೀರ್ತನಾ ಕಾರ್ಯಕ್ರಮದ ಸಮಾರೋಪದ ಅಂಗವಾಗಿ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಂತಿನಗರದ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ. ರಾಧಾ ಮಾತನಾಡಿ, ಮಹಿಳೆಯರನ್ನು ಸಂಘಟಿಸಿ ಪ್ರತಿ ಮನೆಯಲ್ಲೂ ಭಜನೆಯನ್ನು ಪ್ರಸಹರಿಸುತ್ತಿರುವ ಶಾರದಾ ವನಿತಾ ಭಜನಾ ಮಂಡಳಿಯ ಕಾರ್ಯ ಶ್ಲಾಘನೀಯ ಎಂದರು.

ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಿದರು. ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷೆ ಶ್ರೀಮತಿ ಸುಭದ್ರಾ ಭಟ್ ಅಧ್ಯಕ್ಷತೆ ವಹಿಸಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಜಯರಾಮ ನೆಲ್ಲಿತ್ತಾಯ, ಶ್ರೀ ಸಹಸ್ರಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಜಯಂತ ಪೊರೋಳಿ, ಮಾಜಿ ತಾ.ಪಂ. ಸದಸ್ಯ ಎನ್. ಉಮೇಶ್ ಶೆಣೈ, ಮಂಡಳಿಯ ಅಧ್ಯಕ್ಷೆ ಶ್ರೀಮತಿ ಉಷಾಚಂದ್ರ ಮುಳಿಯ, ಕಾರ್ಯದರ್ಶಿ ಪುಷ್ಪಲತಾ ಜನಾರ್ದನ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ಕಾಟುಕುಕ್ಕೆ ದಂಪತಿಯನ್ನು, ಶ್ರೀ ಕಾಳೀಕಾಂಬಾ ಭಜನಾ ಮಂಡಳಿಯ ಅಧ್ಯಕ್ಷ ಶರತ್ ಕೋಟೆ, ಹಾರ್ಮೋನಿಯಂ ವಾದಕ ಮಾಧವ ಆಚಾರ್ಯ, ತಬಲಾ ವಾದಕ ಸುಜಯ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸುಧಾಕರ ಶೆಟ್ಟಿ, ಸುನಿಲ್ ಅನಾವು, ಜಗದೀಶ್ ಶೆಟ್ಟಿ, ರವೀಂದ್ರ ದರ್ಬೆ, ಹರಿಣಿ, ಗಂಗಾಧರ ಟೈಲರ್, ಸುಂದರ ಆದರ್ಶನಗರ, ಶ್ಯಾಮಲಾ ಶೆಣೈ, ಸುಮನ್ ಲದ್ವಾ, ಶೋಭಾ ದಯಾನಂದ್, ಸುಜಾತ ಕೃಷ್ಣ ಆಚಾರ್ಯ, ಗೀತಾಲಕ್ಷ್ಮಿ ತಾಳ್ತಜೆ, ಶಶಿಕಲಾ ಭಾಸ್ಕರ್ , ಮೋಹಿನಿ, ಸೀತಾ, ಸುಗಂಧಿ, ಪುಷ್ಪಲತಾ ತಿಲಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here