ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯ ಕುಡಿಯುವ ನೀರಿನ ಕೊಳವೆಬಾವಿ ಹತ್ತಿರ ಹಾಗೂ ಖಾಸಗಿ ಜಮೀನಿನಲ್ಲಿ ಅನಧಿಕೃತವಾಗಿ ಕೊಳವೆ ಬಾವಿ ಕೊರೆಯುವುದು ನಗರಸಭೆಯ ಗಮನಕ್ಕೆ ಬಂದಿದ್ದು ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದೆ.
ಮುಂದಿನ ದಿನಗಳಲ್ಲಿ ರಾತ್ರಿ ಸಮಯದಲ್ಲಿ ಹಾಗೂ ಸರಕಾರಿ ರಜಾದಿನಗಳಲ್ಲಿ ಅನಧಿಕೃತವಾಗಿ ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆಯುವುದು ಕಂಡುಬಂದಲ್ಲಿ ಬೋರ್‌ವೆಲ್ ಮಾಲಕರ ಪ್ರಮಾಣಪತ್ರ (70)ವನ್ನು ತಡೆಹಿಡಿಯುವ ಬಗ್ಗೆ ಭೂವಿಜ್ಞಾನ ಇಲಾಖೆ ಜಿಲ್ಲಾ ಅಂತರ್ಜಾಲ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಹಾಗೂ ಬೋರ್‌ವೆಲ್ ಲಾರಿ ಹಾಗೂ ಜಮೀನಿನ ಮಾಲಕರ ಮೇಲೆ ಕ್ರಿಮಿನಲ್ ದಾವೆ ಹೂಡಲಾಗುವುದು ಮತ್ತು ಎಲ್ಲಾಕಷ್ಟ ನಷ್ಟಗಳಿಗೆ ಕೊಳವೆಬಾವಿ ಲಾರಿಯವರನ್ನು ಹಾಗೂ ಜಮೀನು ಮಾಲಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.