ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಜಾತ್ರೋತ್ಸವ ಅಂಗವಾಗಿ ಬ್ರಹ್ಮಶ್ರೀ ವೇದಮೂರ್ತಿ ನಿಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಹಿರಿತನದಲ್ಲಿ ಜ. 17ರಂದು ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭಗೊಂಡು ಜ 25ವರೆಗೆ ನಡೆಯಲಿದೆ.
ಜ 17ರಂದು ಬೆಳಿಗ್ಗೆ ಊರವರಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ, ಬಳಿಕ ದೇವಸ್ಥಾನಕ್ಕೆ ದೈವಗಳ ಭಂಡಾರ ಬಂದು, ದೇವರ ಬಲಿ ಹೊರಟು ಧ್ವಜರೋಹಣ, ಮಹಾಪೂಜೆ ನಡೆಯಿತು. ರಾತ್ರಿ ನಾಲ್ಕಂಭ, ಮುದುವ, ಅಬಿಕಾರ, ಬಾರೆಂಗಳಗುತ್ತು, ಜತ್ತೋಡಿ, ಕಲಾಯಿವರೆಗೆ ಕಟ್ಟೆಪೂಜೆ, ದೇವರ ಪೇಟೆ ಸವಾರಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊರಗಪ್ಪ ಗೌಡ ಕುಕ್ಕುನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಕರಂದ್ಲಾಜೆ, ದೇವಳದ ಮಾಜಿ ಆಡಳಿತ ಸಮಿತಿ ಅಧ್ಯಕ್ಷ ಮೋಹನ ಗೌಡ ಇಡ್ಯಡ್ಕ, ಜೋಡುದೈವಗಳ ಆಡಳಿತದಾರ ಕುಸುಮಾಧರ ರೈ ಕಾಸ್ಪಾಡಿಗುತ್ತು, ಅರ್ಚಕ ವೆಂಕಟಕೃಷ್ಣ ಭಟ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನಾರ್ಣಪ್ಪ ಗೌಡ ಜತ್ತೋಡಿ, ವಸಂತ ಪೂಜಾರಿ ದಲಾರಿ, ಉಮೇಶ ಗೌಡ ಮರ್ಲಾಣಿ, ಆನಂದ ಗೌಡ ಬನೇರಿ, ಚಲ್ಲ ಅಯೋಧ್ಯನಗರ, ತಾರಾವತಿ ಬೀರೋಳಿಗೆ, ಜಾನಕಿ ಎರ್ಕ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಡಾ| ಧರ್ಮಪಾಲ ಕರಂದ್ಲಾಜೆ, ಆಡಳಿತ ಪಂಗಡ ಅಧ್ಯಕ್ಷ ಪದ್ಮನಾಭ ಪೊನ್ನೆತ್ತಡಿ, ಕಾರ್ಯದರ್ಶಿ ಶಿವ ಪ್ರಸಾದ್ಕಾ ಕೀಲೆ, ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಜೀರ್ಣೋಧ್ಧಾರ ಸಮಿತಿಯ ಸದಸ್ಯರಾದ ಉದಯಾನಂದ ಅಭಿಕಾರ, ಗೋಪಾಲಕೃಷ್ಣ ಬಾರೆಂಗಳ, ಆನಂದ ಗೌಡ ಇಡ್ಯಡ್ಕ, ಕುಶಾಲಪ್ಪ ಗೌಡ ಕೌಸ್ತುಭಂ ಮುದುವ, ಡೊಂಬಯ್ಯ ಬೀರೊಳಿಕೆ, ಕೊರಗಪ್ಪ ಗೌಡ ಇಡ್ಯಡ್ಕ, ಎಂಟು ಮನೆಯವರಾದ ಡಾ| ಆಶಾ ಅಭಿಕಾರ್ ಬಾರೆಂಗಳಗುತ್ತು, ಗೋಪಾಲಕೃಷ್ಣ ಪಟೇಲ್ ದೇವರಗುಡ್ಡೆ, ಪೂವಕ್ಕ ಕರಂದ್ಲಾಜೆ, ಸತೀಶ್ ಗೌಡ ನೂಜಿ, ಜಗದೀಶ್ ಗೌಡ ಇಡ್ಯಡ್ಕ, ಕೊಲ್ಯ ನವೀನ್ ಪೂಜಾರಿ, ಜತ್ತಪ್ಪ ಗೌಡ ಗಾಳಿಬೆಟ್ಟು, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ ಸೇರಿದಂತೆ ಹಲವಾರು ಮಂದಿ ಭಕ್ತರು ಉಪಸ್ಥಿತರಿದ್ದರು.