ಪುತ್ತೂರು: ಪುತ್ತೂರು ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಅವರ ತಾಯಿ ಯಮುನಾ ಬೊಳಿಯಪ್ಪ ಮೂಲ್ಯ(55ವ) ರವರು ಜ.18 ರಂದು ನಿಧನರಾದರು.
ತಾರಿಗುಡ್ಡೆ ನಿವಾಸಿ ಬೊಳಿಯಪ್ಪ ಮೂಲ್ಯ ಎಂಬವರ ಪತ್ನಿ ಯಮುನಾ ಅವರು ಅನಾರೋಗ್ಯದಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾಗಿದ್ದಾರೆ. ಮೃತರು ಪತಿ ಬೊಳಿಯಪ್ಪ ಮೂಲ್ಯ, ಪುತ್ರ ಕುಲಾಲ ಸಮಾಜ ಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಮತ್ತು ಪುತ್ರಿಯನ್ನು ಅಗಲಿದ್ದಾರೆ.