ಬೈಕ್ ನಾಪತ್ತೆ ಪ್ರಕರಣ- ಬೈಕ್‌ ಬಾರ್‌ ಮುಂದೆ, ಕೀ ಮುಂಡೂರಿನಲ್ಲಿ ಪತ್ತೆ

0

ಪುತ್ತೂರು: ದರ್ಬೆಯಲ್ಲಿ ನಾಪತ್ತೆಯಾದ ಬೈಕ್ ದರ್ಬೆ ಸುಬ್ರಹ್ಮಣ್ಯ ರಸ್ತೆ ಬಳಿ ಇರುವ  ಬಾರ್ ಒಂದರ ಬಳಿ ಪತ್ತೆಯಾಗಿದ್ದು  ಬೈಕ್ ಕೀ ಯನ್ನು  ಮುಂಡೂರು ವ್ಯಕ್ತಿಯೊಬ್ಬರ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.  

ಘಟನೆ ವಿವರ:
ದರ್ಬೆ ಅಂಗಡಿಯೊಂದರ ಮುಂದೆ  ನಿಲ್ಲಿಸಲಾಗಿದ್ದ ಬೈಕ್ ಹಾಡ ಹಗಲೇ  ನಾಪತ್ತೆಯಾಗಿತ್ತು. ಈ ಕುರಿತು ಸಿ ಸಿ ಟಿವಿ ಪರಿಶೀಲಿಸಿದಾಗ  ಬ್ಯಾಂಕ್ ನಿಂದ ಹೊರ ಬಂದ ವ್ಯಕ್ತಿ ಬೈಕನ್ನು ಕೊಂಡೊಯ್ಯುತ್ತಿರುವುದು ಕಂಡು ಬಂದಿದೆ. ಬಳಿಕ ಬ್ಯಾಂಕ್ ಗೆ ತೆರಳಿ ಆ ವ್ಯಕ್ತಿಯ ವಿವರ ಪಡೆದು  ಮುಂಡೂರಿನಲ್ಲಿರುವ ಅವರ ಮನೆಗೆ ತೆರಳಿದಾಗ ಅಲ್ಲಿ ಬೈಕ್ ಕೀ ದೊರಕಿದೆ.ಮಾತ್ರವಲ್ಲ ವಿಚಾರಿಸಿದಾಗ ಬೈಕ್ ಅನ್ನು ದರ್ಬೆಯಲ್ಲಿರುವ ಬಾರ್ ಒಂದರ ಮುಂದೆ  ನಿಲ್ಲಿಸಿರುವ ವಿಚಾರ ತಿಳಿದು ಬಂದಿದೆ.

ಬ್ಯಾಂಕ್ ಗೆ ಬಂದಿದ್ದ ಆ ವ್ಯಕ್ತಿ ಖಾತೆಯಿಂದ ಹಣ ಪಡೆಯಲಾಗಿಲ್ಲ ಎಂಬ ಚಿಂತೆಯಿಂದ ಹೊರಗಡೆ ನಿಲ್ಲಿಸಿದ್ದ ಯಾರದ್ದೋ ಬೈಕ್ ಏರಿ ಬಾರ್ ಗೆ ತೆರಳಿ ಕಂಠಪೂರ್ತಿ ಮಧ್ಯ ಸೇವನೆ ಮಾಡಿದ್ದರು. ಪಾನಮತ್ತರಾಗಿದ್ದ ಆತನನ್ನು ಬಾರ್ ನ ಸಿಬ್ಬಂದಿಗಳು ಅಟೋ ರಿಕ್ಷಾವೊಂದರಲ್ಲಿ ಮನೆಗೆ ತಲುಪಿಸಿದ್ದರು. ಬೈಕ್ ಮಾತ್ರ ಬಾರ್ ಮುಂದೆ ಉಳಿದರೆ, ಬೈಕ್ ನ ಕೀ ವ್ಯಕ್ತಿಯೊಂದಿಗೆ ಅವರ ಮನೆ ಸೇರಿತ್ತು.

ಒಟ್ಟಿನಲ್ಲಿ ಬೈಕ್‌ ಕಾಣೆ ಪ್ರಕರಣ ನಿರೀಕ್ಷೆಗೂ ಮೀರಿದ ಕುತೂಹಲದೊಂದಿಗೆ ಅಂತ್ಯಗೊಂಡಿದ್ದು, ಬೈಕ್‌ವಾರಿಸುದಾರರ ಕೈ ಸೇರಿದೆ.

LEAVE A REPLY

Please enter your comment!
Please enter your name here