Saturday, February 4, 2023
Homeಚಿತ್ರ ವರದಿಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಪ್ರಥಮ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ಪ್ರಥಮ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಪುತ್ತೂರು: ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜ.26ರಂದು ನಡೆಯಲಿರುವ ಪ್ರಥಮ ಜಾತ್ರೋತ್ಸವಕ್ಕೆ ಜ.19ರಂದು ಗೊನೆ ಮುಹೂರ್ತ ನೆರವೇರಿತು. ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗೊನೆ ಮುಹೂರ್ತ ನೆರವೇರಿಸಲಾಯಿತು.

ದೇವಸ್ಥಾನದ ತಂತ್ರಿ ಪ್ರೀತಮ್‌ ಪುತ್ತೂರಾಯ ಗೊನೆ ಮುಹೂರ್ತ ನೆರವೇರಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಸದಸ್ಯರಾದ ಜಯಕುಮಾರ್ ಆರ್.ನಾಯರ್, ಲಕ್ಷ್ಮಣ್ ಬೈಲಾಡಿ, ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ವಿನ್ಯಾಸ್ ಯು.ಎಸ್., ಜಗದೀಶ್ ಎಂ., ‌ ಶಶಿಕಲಾ‌ ನಿರಂಜನ ಶೆಟ್ಟಿ, ಪ್ರೇಮಾ‌ ಶಿವಪ್ಪ, ಅರ್ಚಕ ಮೋಹನ್‌ ರಾವ್‌ ಪಜಿಮಣ್ಣು, ಉತ್ಸವ ಸಮಿತಿ ಗೌರವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಭೀಮಯ್ಯ ಭಟ್ ಸಾಮೆತ್ತಡ್ಕ, ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಮೊಟ್ಟೆತ್ತಡ್ಕ, ಸಂಪ್ಯ ನವಚೇತನಾ ಯುವಕ ಮಂಡಲ ಸಂಪ್ಯ ಉದಯಗಿರಿ ವಿಷ್ಣು ಬಳಗ, ಮುಕ್ರುಂಪಾಡಿ‌ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Must Read

spot_img
error: Content is protected !!