ಕುಂಬ್ರ: ಪತ್ರಕರ್ತನ ಹೆಲ್ಮೆಟ್‌ಗೆ ಕನ್ನ ಹಾಕಿದ ಕಳ್ಳ

0

ಪುತ್ತೂರು: ಸ್ಕೂಟರ್‌ನ ಕನ್ನಡಿಗೆ ಸಿಕ್ಕಿಸಿದ್ದ ಹೆಲ್ಮೆಟ್ ಅನ್ನು ಕಳವು ಮಾಡಿದ ಘಟನೆ ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನ ವಠಾರದಲ್ಲಿ ನಡೆದಿದೆ. ಕಾಂಪ್ಲೆಕ್ಸ್‌ನಲ್ಲಿರುವ ಸುದ್ದಿ ಬಿಡುಗಡೆ ಕಛೇರಿಯ ಎದುರು ನಿಲ್ಲಿಸಿದ್ದ ಪತ್ರಕರ್ತ ಸಿದ್ದಿಕ್ ಕುಂಬ್ರರವರ ಸ್ಕೂಟರ್‌ನಲ್ಲಿಟ್ಟಿದ್ದ ಹೆಲ್ಮೆಟ್ ಅನ್ನು ಜ.18 ರಂದು ಸಂಜೆ ಕಳ್ಳರು ಕಳವು ಮಾಡಿದ್ದಾರೆ. ಸಿದ್ದಿಕ್ ಕುಂಬ್ರರವರು ಸಂಜೆ ವೇಳೆ ಕಛೇರಿ ಎದುರು ಸ್ಕೂಟರ್ ನಿಲ್ಲಿಸಿ ಹೆಲ್ಮೆಟ್ ಅನ್ನು ಸ್ಕೂಟರ್‌ನ ಕನ್ನಡಿಗೆ ಸಿಕ್ಕಿಸಿ ಕಛೇರಿಯೊಳಗೆ ಕೆಲಸ ಮಾಡಿಕೊಂಡಿದ್ದರು. ರಾತ್ರಿ 7 ಗಂಟೆ ಸುಮಾರಿಗೆ ಹೊರಗೆ ಬಂದು ನೋಡಿದಾಗ ಹೆಲ್ಮೆಟ್ ಕಳ್ಳತನ ಆಗಿರುವುದು ಕಂಡು ಬಂದಿದೆ. ಈ ಹಿಂದೆ ಕೂಡ ಇವರ ಹೆಲ್ಮೆಟ್ ಕಳವಾಗಿತ್ತು. ಕುಂಬ್ರ ಎಟಿಎಂ ಬಳಿ ಇರುವ ಸಿಸಿ ಕ್ಯಾಮರಾದಲ್ಲಿ ಕಳವು ಕೃತ್ಯ ದಾಖಲಾಗಿದ್ದು ಕಳ್ಳನನ್ನು ಪತ್ತೆ ಹಚ್ಚುವ ಕಾರ್ಯಕ್ಕೆ ನೆರವು ಆಗಲಿದೆ.

LEAVE A REPLY

Please enter your comment!
Please enter your name here