ಪುತ್ತೂರು: ಕೆ.ಎಸ್.ಆರ್.ಟಿ.ಸಿ. ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.24ರಂದು ಧರಣಿ ಸತ್ಯಾಗ್ರಹ ನಡೆಯಲಿದೆ.
ಪುತ್ತೂರು ವಿಭಾಗದ ಪ್ರಮುಖ ಸಂಘಟನೆಗಳಾದ AITUC, CITU, KSRTC SC/ST ಯೂನಿಯನ್ ನೇತೃತ್ವದಲ್ಲಿ ಜ.24ರಂದು ಬೆಳಿಗ್ಗೆ 10.30ರಿಂದ ಪುತ್ತೂರು ವಿಭಾಗದ ಎಲ್ಲಾ ಕಾರ್ಮಿಕರ ಸಹಕಾರದೊಂದಿಗೆ ಮೊಟ್ಟೆತ್ತಡ್ಕದಲ್ಲಿರುವ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಣಾಧಿಕಾರಿಯವರ ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ವಜಾಗೊಂಡ ಕಾರ್ಮಿಕರನ್ನು ಯಾವುದೇ ಷರತ್ತು ಇಲ್ಲದೆ ನೇಮಿಸಿಕೊಳ್ಳಬೇಕು, ವೇತನ ಪರಿಷ್ಕರಣೆ ಮಾಡಬೇಕು, ನಿವೃತ್ತ ಕಾರ್ಮಿಕರಿಗೆ ಪಿಂಚಣಿ ಮತ್ತು ಉಪಧನ ನೀಡಬೇಕು, ಫಾರ್ಮ್ ನಂಬರ್, ಓ.ಟಿ ನೀಡಬೇಕು ಎಂದು ಆಗ್ರಹಿಸಿ ಮತ್ತು ಕಾರ್ಮಿಕರ ಇತರ ಕೊರತೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಸರಕಾರದ ಗಮನ ಸೆಳೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ನಾಯಕರ ಸಲಹೆ ಮತ್ತು ಸೂಚನೆಯಂತೆ ಪುತ್ತೂರು ವಿಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸ್ಟಾಫ್ & ವರ್ಕರ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಕೋಚಣ್ಣ ಪೂಜಾರಿ ತಿಳಿಸಿದ್ದಾರೆ.