ವಿಜಯವಾಣಿ ತಾಲೂಕು ವರದಿಗಾರರಾಗಿ ನಿಶಾಂತ್ ಬಿಲ್ಲಂಪದವು

0

ತಾ| ವರದಿಗಾರರಾಗಿದ್ದ ಶಶಿಧರ್ ರೈ ಕುತ್ಯಾಳರಿಗೆ ಪುತ್ತೂರಿನಿಂದ ಬಿಡುಗಡೆ

ಪುತ್ತೂರು: ವಿಜಯವಾಣಿ ಕನ್ನಡ ದಿನ ಪತ್ರಿಕೆಯ ಪುತ್ತೂರು ತಾಲೂಕು ವರದಿಗಾರರಾಗಿ ವಿಟ್ಲದ ನಿಶಾಂತ್ ಬಿಲ್ಲಂಪದವು ಅವರನ್ನು ನಿಯೋಜಿಸಲಾಗಿದ್ದು ಪುತ್ತೂರು ತಾಲೂಕು ಬಿಡಿಸುದ್ದಿ ವರದಿಗಾರರಾಗಿ ಕೆಲಸ ಮಾಡಿಕೊಂಡಿದ್ದ ಶಶಿಧರ್ ರೈ ಕುತ್ಯಾಳ ಅವರನ್ನು ಪುತ್ತೂರು ತಾಲೂಕು ವರದಿಗಾರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.

ಪುತ್ತೂರಿನಲ್ಲಿ ವಿಜಯವಾಣಿ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರವಣ್ ಕುಮಾರ್ ನಾಳ ಅವರಿಗೆ ಪದೋನ್ನತಿ ನೀಡಿ ವರ್ಗಾವಣೆಗೊಳಿಸಲಾಗಿದೆ. ಇದರಿಂದಾಗಿ ಪುತ್ತೂರು ತಾಲೂಕು ವರದಿಗಾರ ಹುದ್ದೆ ತೆರವಾಗಿತ್ತು. ಈಶ್ವರಮಂಗಲದಲ್ಲಿ ಬಿಡಿಸುದ್ದಿ ವರದಿಗಾರರಾಗಿದ್ದ ಶಶಿಧರ ರೈ ಕುತ್ಯಾಳ ಅವರು ತಾಲೂಕು ಬಿಡಿಸುದ್ದಿ ವರದಿಗಾರರಾಗಿ ನಿಯೋಜಿತಗೊಂಡಿದ್ದರು. ಆದರೆ ಇದೀಗ ವಿಟ್ಲದಲ್ಲಿ ಬಿಡಿಸುದ್ದಿ ವರದಿಗಾರರಾಗಿರುವ ನಿಶಾಂತ್ ಬಿಲ್ಲಂಪದವು ಅವರನ್ನು ಪುತ್ತೂರು ತಾಲೂಕು ವರದಿಗಾರರಾಗಿ ನಿಯೋಜಿಸಲಾಗಿದ್ದು, ತಾಲೂಕು ಬಿಡಿ ಸುದ್ದಿ ವರದಿಗಾರರಾಗಿದ್ದ ಶಶಿಧರ ರೈ ಕುತ್ಯಾಳ ಅವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಇತ್ತೀಚೆಗೆ ವಿಜಯವಾಣಿಯ ಪ್ರಧಾನ ಸಂಪಾದಕ ಚೆನ್ನೇಗೌಡರವರು ಮಂಗಳೂರಿಗೆ ಬಂದವರು ಪುತ್ತೂರಿಗೆ ಆಗಮಿಸಿದ್ದ ಸಂದರ್ಭ ಪುತ್ತೂರು ತಾಲೂಕು ವರದಿಗಾರ ಹುದ್ದೆಗೆ ಆಯ್ಕೆಗೆ ಸಂಬಂಧಿಸಿ ಸಂದರ್ಶನ ನಡೆಸಿ, ನಿಶಾಂತ್ ಬಿಲ್ಲಂಪದವು ಅವರನ್ನು ವಿಟ್ಲದ ಬಿಡಿಸುದ್ದಿ ವರದಿಗಾರಿಕೆ ಜೊತೆಗೆ ಪುತ್ತೂರು ತಾಲೂಕು ವರದಿಗಾರರಾಗಿಯೂ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದ್ದಾರೆ. ಅದರಂತೆ, ನಿಶಾಂತ್ ಬಿಲ್ಲಂಪದವು ಅವರು ಈಗಾಗಲೇ ಪುತ್ತೂರು ತಾಲೂಕು ವರದಿಗಾರರಾಗಿ ಕರ್ತವ್ಯಕ್ಕೆ ಹಾಜರಾಗಿರುವುದರಿಂದ ಶಶಿಧರ್ ರೈ ಕುತ್ಯಾಳ ಅವರು ಪುತ್ತೂರು ತಾಲೂಕು ವರದಿಗಾರ ಹುದ್ದೆಯಿಂದ ಬಿಡುಗಡೆಗೊಂಡಿದ್ದಾರೆ.

ನಾಳರವರಿಗೆ ಭಡ್ತಿ ಮಂಗಳೂರಿಗೆ ವರ್ಗ

ಈ ಹಿಂದೆ ವಿಜಯವಾಣಿ ಜಿಲ್ಲಾ ವರದಿಗಾರರಾಗಿ ಪುತ್ತೂರುನಲ್ಲಿ ಕರ್ತವ್ಯದಲ್ಲಿದ್ದ ಶ್ರವಣ್ ಕುಮಾರ್ ನಾಳ ಅವರಿಗೆ ಮುಂಭಡ್ತಿ ನೀಡಿ, ಉಡುಪಿ ಮತ್ತು ಮಂಗಳೂರು ಬ್ಯೂರೋ ಹೊಂದಿರುವ ಮಂಗಳೂರು ಕೇಂದ್ರ ಕಚೇರಿಗೆ ವರದಿಗಾರರಾಗಿ ನಿಯೋಜಿಸಲಾಗಿದೆ. ಆ ಬಳಿಕ ತಾಲೂಕು ವರದಿಗಾರ ಹುದ್ದೆ ಖಾಲಿಯಾಗಿತ್ತು. ಬಳಿಕ ಶಶಿಧರ ರೈ ಕುತ್ಯಾಳ ಪುತ್ತೂರು ತಾಲೂಕು ಬಿಡಿಸುದ್ದಿ ವರದಿಗಾರರಾಗಿ ಕೆಲಸ ಮಾಡಿಕೊಂಡಿದ್ದರು. ಇದೀಗ ವಿಟ್ಲದ ನಿಶಾಂತ್ ಬಿಲ್ಲಂಪದವು ಅವರು ತಾಲೂಕು ವರದಿಗಾರರಾಗಿ ಆಗಮಿಸಿರುವುದರಿಂದ ಶಶಿಧರ್ ರೈ ಕುತ್ಯಾಳ ಅವರನ್ನು ಪುತ್ತೂರಿನಿಂದ ಬಿಡುಗಡೆಗೊಳಿಸಲಾಗಿದೆ.

LEAVE A REPLY

Please enter your comment!
Please enter your name here