ಕಡಬ: ವಿವಾಹಿತ ಮಹಿಳೆ ಮತ್ತು ವಿವಾಹಿತ ಪುರುಷನೊಬ್ಬ ಪ್ರೇಮಿಗಳಾಗಿದ್ದು ಊರಿನಿಂದ ಪರಾರಿಯಾಗಿ ಮೂಡಿಗೆರೆ ಬಳಿ ಸಿಕ್ಕಿ ಬಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ವಿವಾಹಿತ ಪುರುಷ ಕೊಣಾಜೆಯ ಮಹಿಳೆ ಜೊತೆ ಪರಾರಿಯಾಗಿದ್ದು, ಮೂರು ದಿನಗಳ ಬಳಿಕ ಮೂಡಿಗೆರೆಯಲ್ಲಿ ಪತ್ತೆಯಾಗಿದ್ದರು. ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಓಳಗಾಗಿದ್ದ ಈ ಘಟನೆ ಈಗ ಠಾಣೆಯ ಮೆಟ್ಟಿಲೇರಿದೆ.
ದೂರಿನ ಮೇರೆಗೆ ಪೊಲೀಸರು ಮೂಡಿಗೆರೆ ಬಳಿಯಿಂದ ಇಬ್ಬರನ್ನೂ ಠಾಣೆಗೆ ಕರೆತಂದಿದ್ದು ಮನೆಯವರೊಂದಿಗೆ ನಡೆಸಿದ ಸುದೀರ್ಘ ಮಾತುಕತೆಯ ಬಳಿಕ ಪ್ರಕರಣ ಸುಖಾಂತ್ಯಗೊಂಡಿದೆ. ಈ ಸಂಬಂಧ ಯಾವುದೇ ಕೇಸು ದಾಖಲಾಗದ ಕಾರಣ ಪೊಲೀಸರಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.