ಬನ್ನೂರು ಮಹಾಲಕ್ಷ್ಮೀ ಮಂದಿರದಲ್ಲಿ ಮತ್ತೊಮ್ಮೆ ಪವಾಡ !

0

ಪ್ರತಿಷ್ಠಾ ವರ್ಷದ ಪೂಜೆಯಲ್ಲಿ ಶ್ರೀದೇವರ ವಿಗ್ರಹದಿಂದ ತುಳಸಿ ಮಾಲೆ ಅನುಗ್ರಹ

ಪುತ್ತೂರು: ಬನ್ನೂರು ಮಹಾಲಕ್ಷ್ಮೀ ಮಂದಿರದಲ್ಲಿ ಕಳೆದ ವರ್ಷ ಬ್ರಹ್ಮಕಲಶೋತ್ಸವದಲ್ಲಿ ಅಮ್ಮನವರ ಪಾದದಿಂದ ಹಿಂಗಾರ ಪ್ರಸಾದ ರೂಪದಲ್ಲಿ ಭೂ ಸ್ಪರ್ಶವಾದ ಘಟನೆ ನಡೆದು ಸರಿ ಒಂದು ವರ್ಷದ ಬಳಿಕ ನಡೆದ ಪ್ರತಿಷ್ಠಾ ವಾರ್ಷಿಕೋತ್ಸವ ಪೂಜೆ ವೇಳೆ ಶ್ರೀ ದೇವರ ಬಲಭಾಗದಿಂದ ತುಳಸಿ ಮಾಲೆ ಜಾರುವ ಮೂಲಕ ಮತ್ತೊಮ್ಮೆ ಪವಾಡ ನಡೆದಿದೆ.

ಬ್ರಹ್ಮಶ್ರೀ ವೇ ಮೂ ಸುಬ್ರಹ್ಮಣ್ಯ ಬಳ್ಳಕುರಾಯ ಅವರ ನೇತೃತ್ವದಲ್ಲಿ ಬನ್ನೂರು ಶ್ರೀಮಹಾಲಕ್ಷ್ಮೀ ಮಂದಿರದಲ್ಲಿ ಅಮ್ಮನವರ ಬಿಂಬ ಪ್ರತಿಷ್ಠೆ ವೇಳೆ ಪ್ರತಿಷ್ಠಾ ಜಪ ಮಾಡುತ್ತಿದ್ದ ಸಂದರ್ಭ ಅಮ್ಮನವರ ಶಿಲಾ ಬಿಂಬದ ಪಾದದಲ್ಲಿದ್ದ ಹಿಂಗಾರವು ಪ್ರಸಾದ ರೂಪದಲ್ಲಿ ಭೂಸ್ಪರ್ಶವಾದ ಘಟನೆ ಭಕ್ತರ ಕಣ್ಣು ಮುಂದೆ ನಡೆದಿತ್ತು.‌ ಇದೀಗ ಪ್ರತಿಷ್ಠಾ ವಾರ್ಷಿಕೋತ್ಸವ ಸಂದರ್ಭದಲ್ಲಿ ಶ್ರೀ ಶಿವಪಾರ್ವತಿ ಮಂದಿರದ ಅರ್ಚಕರು ಮಹಾಪೂಜೆ ಮಾಡುತ್ತಿರುವ ವೇಳೆ ಶ್ರೀ ದೇವರ ಬಲ ಭಾಗದಿಂದ ತುಳಸಿ ಮಾಲೆ ಜಾರುವ ಮೂಲಕ ಪವಾಡ ನಡೆದಿದೆ ಎಂದು ಪೂಜೆಯ ಸಂದರ್ಭ ಉಪಸ್ಥಿತರಿದ್ದ ಭಕ್ತರು ತಿಳಿಸಿದ್ದಾರೆ. ಒಟ್ಟಿನಲ್ಲಿ ಬನ್ನೂರು ಮಹಾಲಕ್ಷ್ಮೀ ಕ್ಷೇತ್ರ ಕಾರ್ಣಿಕ ಶಕ್ತಿಯಾಗಿ ಇಲ್ಲಿ ನೆಲೆಸಿದ್ದಾರೆ ಎಂದು ಭಕ್ತರ ಮನದಾಳದ ಮಾತು.

LEAVE A REPLY

Please enter your comment!
Please enter your name here