ಮಾಣಿ ಮಠ ಬ್ರಹ್ಮಕಲಶೋತ್ಸವ: ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ

0

ಮಾಣಿ: ಜ.22ರಿಂದ 26ರವರೆಗೆ ನಡೆಯುವ ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ನೂತನ ಶಿಲಾಮಯ ಗರ್ಭಗುಡಿಯಲ್ಲಿ ಸಪರಿವಾರ ಶ್ರೀರಾಮದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವದ ಅಂಗವಾಗಿ ಜ.21ರಂದು ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲಾಯಿತು. ಜಿಲ್ಲೆಯ ಮೂಲೆ ಮೂಲೆಗಳಿಂದ ವಾಹನಗಳಲ್ಲಿ ಆಗಮಿಸಿದ್ದ ಭಕ್ತಾದಿಗಳು ಈ ಸಹಸ್ರಮಾನದ ಕಾರ್ಯಕ್ರಮಕ್ಕೆ ಸುವಸ್ತುಗಳನ್ನು ಸಮರ್ಪಿಸಿದರು.

ಮಂಗಳೂರು- ಮೈಸೂರು ಹೆದ್ದಾರಿಯ ಕೋದಂಡದ್ವಾರದ ಬಳಿ ಶ್ರೀರಾಮದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಸುರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಹೋಬಳಿ ಮುಖಂಡರಾದ ಮುಗುಳಿ ತಿರುಮಲೇಶ್ವರ ಭಟ್  ಚಾಲನೆ ನೀಡಿದರು.

ಜನವರಿ 22ರಂದು ಭಾನುವಾರ  ಮಧ್ಯಾಹ್ನ 3 ಗಂಟೆಗೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಪುರಪ್ರವೇಶ ಸಮಾರಂಭ ನಡೆಯಲಿದೆ.

LEAVE A REPLY

Please enter your comment!
Please enter your name here