ನೆಲ್ಯಾಡಿ; ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ೭೫ರ ನೆಲ್ಯಾಡಿ ಕೆಎಸ್ಆರ್ಟಿಸಿ ಬಸ್ನಿಲ್ದಾಣದ ಸಮೀಪ ನಿರ್ಮಾಣಗೊಂಡಿರುವ ಡಿಯೋನ್ ಗ್ರೂಪ್ನವರ ಸುಸಜ್ಜಿತ ವಾಣಿಜ್ಯ ಸಂಕೀರ್ಣ ‘ ಡಿಯೋನ್ ಸ್ಕ್ವೇರ್’ ಜ.21ರಂದು ಬೆಳಿಗ್ಗೆ ಶುಭಾರಂಭಗೊಂಡಿತು.
ಡಿಯೋನ್ ಸ್ಕ್ವೇರ್ನ ಮಾಲಕ ಎ.ಕೆ.ವರ್ಗೀಸ್ರವರ ಪುತ್ರಿ ಕ್ರಿಸ್ಟಿನಾ ಹಾಗೂ ಪುತ್ರ ಡಿಯೋನ್ರವರು ರಿಬ್ಬನ್ ಕತ್ತರಿಸುವ ಮೂಲಕ ವಾಣಿಜ್ಯ ಸಂಕೀರ್ಣ ಉದ್ಘಾಟಿಸಿದರು. ಎ.ಕೆ.ವರ್ಗೀಸ್ ಹಾಗೂ ಅವರ ಪತ್ನಿ ಶೈಲೆಟ್ ಆಂಟನಿ ಅವರು ದೀಪ ಬೆಳಗಿಸಿದರು. ಉದನೆ ಚರ್ಚ್ನ ಧರ್ಮಗುರು ಫಾ.ತೋಮಸ್ ಅವರು ಆಶೀರ್ವಚನ ವಿಧಿ ವಿಧಾನ ನೆರವೇರಿಸಿ, ನೂತನ ವಾಣಿಜ್ಯ ಸಂಕೀರ್ಣದಲ್ಲಿ ಎಲ್ಲಾ ರೀತಿಯ ಸೌಲಭ್ಯಗಳೂ ಸಿಗುವ ಮೂಲಕ ಗ್ರಾಹಕರ ಆಕರ್ಷಣೆಯ ಕೇಂದ್ರವಾಗಲಿ. ಸಂಸ್ಥೆ ಉತ್ತರೋತ್ತರ ಬೆಳಗಲಿ ಎಂದರು.
ಉದನೆ ಸಂತ ಆಂಟನೀಸ್ ವಿದ್ಯಾಸಂಸ್ಥೆಯ ಸಂಚಾಲಕರಾದ ಫಾ.ಹನಿ ಜೇಕಬ್ರವರು ಮಾತನಾಡಿ, ನೆಲ್ಯಾಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಇಂತಹ ದೊಡ್ಡ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡಿರುವುದು ಹೆಮ್ಮೆಯಾಗಿದೆ. ಈ ವಾಣಿಜ್ಯ ಸಂಕೀರ್ಣದ ಮಾಲಕರಾಗಿರುವ ಎ.ಕೆ.ವರ್ಗೀಸ್ರವರು ಸರಳ ಸಜ್ಜಿನಿಕೆ ವ್ಯಕ್ತಿಯಾಗಿದ್ದು ಸಾಮಾಜಿಕ ಕಳಕಳಿ ಉಳ್ಳವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಉದ್ದಿಮೆಯೂ ಮತ್ತಷ್ಟೂ ಎತ್ತರಕ್ಕೆ ಬೆಳೆಯಲಿ. ನೆಲ್ಯಾಡಿಯ ಅಭಿವೃದ್ಧಿಗೆ ಪೂರಕ ಆಗುವುದರೊಂದಿಗೆ ನೆಲ್ಯಾಡಿ ಜನತೆಗೂ ಪ್ರಯೋಜನ ಸಿಗುವಂತಾಗಲಿ ಎಂದು ಹೇಳಿ ಶುಭಹಾರೈಸಿದರು. ಧರ್ಮಗುರುಗಳಾದ ಫಾ.ಜೋಸೆಫ್ ಪಂಪಕಲ್, ನೆಲ್ಯಾಡಿ ಅಲ್ಫೋನ್ಸಾ ಚರ್ಚ್ನ ಫಾ.ಜಿನ್ಸಿ, ಫಾ.ಶಾಜನ್, ಫಾ.ಬಿಜಿಲಿ ಅವರು ಆಶೀರ್ವಚನ ವಿಧಿ ವಿಧಾನದಲ್ಲಿ ಸಹಕರಿಸಿದರು.
ಜಿ.ಪಂ.ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಬಾಲಕೃಷ್ಣ ಬಾಣಜಾಲು, ಉದ್ಯಮಿ ಕೆ.ಪಿ.ತೋಮಸ್, ನಿವೃತ್ತ ಸೈನಿಕ ಒ.ಜೆ.ನೈನಾನ್, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕರಾದ ಅಬ್ರಹಾಂ ವರ್ಗೀಸ್, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಂಗಾಧರ ಶೆಟ್ಟಿ ಹೊಸಮನೆ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಉಲಹನ್ನನ್, ನೆಲ್ಯಾಡಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಸಲಾಂ ಪಡುಬೆಟ್ಟು, ಮಾಜಿ ಸದಸ್ಯ ಕೆ.ಪಿ.ಅಬ್ರಹಾಂ, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಉದಯಕುಮಾರ್ ದೋಂತಿಲ, ಕೆ.ಎಂ.ಹನೀಫ್, ಮಹೇಶ್ ಕೊಕ್ಕಡ, ಲೋಕೇಶ್ ಬಾಣಜಾಲು, ಕೌಕ್ರಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ, ಇಂಜಿನಿಯರ್ ಚಾಕೋ, ನೆಲ್ಯಾಡಿ ಸುಬ್ರಹ್ಮಣ್ಯ ವಿಲಾಸ ಹೋಟೆಲ್ನ ಮಾಲಕ ಸುಬ್ರಹ್ಮಣ್ಯ ಆಚಾರ್, ಮಂಗಳೂರಿನ ಉದ್ಯಮಿ ಖಾದರ್ ಆಲಿ, ಗುರುಕೃಪಾ ಹೋಟೆಲ್ನ ಮಾಲಕ ಕುಶಾಲಪ್ಪ ಕೋಟ್ಯಾನ್, ಜೈನ್ ಆಯಿಲ್ ಮಿಲ್ನ ಸಂತೋಷ್ಕುಮಾರ್, ನ್ಯೂ ರಾಜಸ್ಥಾನ ಗ್ರಾನೈಟ್ನ ಶೈಜು, ನೆಲ್ಯಾಡಿಯ ಉದ್ಯಮಿಗಳಾದ ಸತೀಶ್ ಕೆ.ಎಸ್.ದುರ್ಗಾಶ್ರೀ, ಜೋಸ್ ಕೆ.ಜೆ., ನಾಝೀಂ ಸಾಹೇಬ್, ಗಣೇಶ್ ಕೆ.ರಶ್ಮಿ, ಚರಣ್ ಪೂವಾಜೆ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ನಿವೃತ್ತ ಶಿಕ್ಷಕಿ ಎಲಿಯಮ್ಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಾಲಕ ಎ.ಕೆ.ವರ್ಗೀಸ್ರವರ ಪುತ್ರ ಡಿಯೋನ್ ವಂದಿಸಿದರು.
ಸನ್ಮಾನ:
ವಾಣಿಜ್ಯ ಸಂಕೀರ್ಣದ ಇಂಜಿನಿಯರ್ ಜೋಯಿ ಹಾಗೂ ನೆಲ್ಯಾಡಿಯ ಶಿವಣ್ಣ ಪಿ.ಹೆಗ್ಡೆ ಅವರಿಗೆ ಡಿಯೋನ್ ಆರ್ಕೇಡ್ನ ಮಾಲಕ ಎ.ಕೆ.ವರ್ಗೀಸ್ರವರು ಶಾಲು ಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು.
ಸುಸಜ್ಜಿತ ವಾಣಿಜ್ಯ ಸಂಕೀರ್ಣ:
‘ಡಿಯೋನ್ ಸ್ಕ್ವೇರ್’ 27 ಸಾವಿರ ಚದರ ಅಡಿ ವಿಸ್ತೀರ್ಣಹೊಂದಿದ್ದು ನೆಲ ಅಂತಸ್ತು ಹಾಗೂ 2 ಅಂತಸ್ತು ಹೊಂದಿದೆ. 300 ರಿಂದ 3000 ಚದರ ಅಡಿಯ ಸುಮಾರು 65 ಅಂಗಡಿ ಕೊಠಡಿಗಳು ಇದರಲ್ಲಿ ಇದೆ. ಲಿಫ್ಟ್, ಶೌಚಾಲಯ, ವಿಶಾಲವಾದ ಪಾರ್ಕಿಂಗ್, ಜನರೇಟರ್, ದಿನದ 24 ಗಂಟೆಯೂ ಸೆಕ್ಯುರಿಟಿ ವ್ಯವಸ್ಥೆಯನ್ನು ಈ ವಾಣಿಜ್ಯ ಸಂಕೀರ್ಣ ಹೊಂದಿದೆ. ನೂತನ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ಕೋಣೆಗಳಿಗಾಗಿ ಆಸಕ್ತರು ಮೊ:9660142352 ನಂಬರ್ಗೆ ಸಂಪರ್ಕಿಸಬಹುದಾಗಿದೆ.