ಪುತ್ತೂರು : ಭೈರವೈಕ್ಯ ಶ್ರೀ ಡಾ| ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಜಯಂತ್ಯೋತ್ಸವ ಸಂಸ್ಮರಣೆಯ ಅದ್ದೂರಿ ಶೋಭಾಯಾತ್ರೆಯು ಬೆಳಿಗ್ಗೆ ದರ್ಬೆಯಿಂದ ಆರಂಭಗೊಂಡಿತು.ಮೆರವಣಿಗೆಯುಲ್ಲಿ 10 ಸ್ತಬ್ದ ಚಿತ್ರಗಳು, 37 ವಿವಿಧ ನೃತ್ಯ ತಂಡಗಳು, ಜನಪದ ಕಲೆಗಳ ಪ್ರದರ್ಶನ ಶೋಭಾಯಾತ್ರೆಯ ಮೆರುಗು ನೀಡಿತು.
ಭಾರತಮಾತೆ ಅಲಂಕೃತ ವಾಹನ, ಚೆಂಡೆ, ಭಗವಾಧ್ವಜ, ಕೊಡೆಗಳು, ಭಜನಾ ತಂಡ, ಸ್ವಾಮೀಜಿ ಪ್ರತಿಮೆ ಇರುವ ರಥ, ನಾಧಸ್ವರ, ಬಣ್ಣ ಬಣ್ಣದ ಕೊಡೆಗಳು, ಗೊಂಬೆಗಳು, ಬ್ಯಾಂಡ್‌ಸೆಟ್, ಕೊಡಗು ನೃತ್ಯ, ಸ್ತಬ್ದ ಚಿತ್ರಗಳು, ವೀರಗಾಸೆ ನೃತ್ಯ, ಕಂಸಾಲೆ, ಡೊಳ್ಳುಕುಣಿತ, ಚೆಂಡೆ, ಸಪ್ತವರ್ಣದ ಸೀರೆಯುಟ್ಟ ನಾರಿಯರ ಸಪ್ತ ಗುಂಪುಗಳು ಕಾಲಭೈರವೇಶ್ವರ ಮತ್ತು ಅಮ್ಮನವರ ರಥ, ಯಾತ್ರೆಯುದ್ದಕ್ಕೂ ನೋಡುಗರ ಕಣ್ಮನ ಸೆಲೆಯುತ್ತಿದೆ.
ಶ್ರೀ ನಿರ್ಮಾಲಾನಂದ ಸ್ವಾಮಿಜಿ, ಶ್ರೀ ಧರ್ಮಪಾಲನಾಥ ಸ್ವಾಮಿಜಿ, ಡಿ ಕೆ ಶಿವಕುಮಾರ್, ಡಿವಿ ಸದಾನಂದ ಗೌಡ , ಸಂಜೀವ ಮಠಂದೂರು ಸೇರಿದಂತೆ ಸಮಾಜದ ಅಗ್ರಗಣ್ಯ ನಾಯಕರು ಈಗಾಗಲೇ ಪುತ್ತೂರು ತಲುಪಿದ್ದಾರೆ.