ಆರ್‌ಎಸ್‌ಎಸ್ ಕುಟುಂಬ ಪ್ರಬೋಧನ ಸಂಯೋಜಕ ಬಡೆಕ್ಕಿಲ ಶಂಕರ್ ಭಟ್ ನಿಧನ

0

ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುಟುಂಬ ಪ್ರಬೋಧನ ಸಂಯೋಜಕ ಸಾಮೆತ್ತಡ್ಕ ನಿವಾಸಿ ಬಡೆಕ್ಕಿಲ ಶಂಕರ್ ಭಟ್ ಜ.25ರಂದು ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಕೆನರಾ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿ, ಬಡೆಕ್ಕಿಲ ಶಂಕರ್ ಭಟ್ ಅವರು ಬೆಂಗಳೂರಿನ ಮಗಳ ಮನೆಗೆ ತೆರಳಿದ್ದರು. ಅಲ್ಲಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು. ಶಂಕರ್ ಭಟ್ ಅವರು ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರಾಗಿ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ನಿವೃತ್ತ ಜೀವನದ ಬಳಿಕ ತನ್ನ ಸಂಘ ಕಾರ್ಯದಲ್ಲಿ ಪೂರ್ಣಾವಧಿಯಾಗಿದ್ದರು. ವಿಶೇಷವಾಗಿ ಸಂಘದ ಪುತ್ತೂರು ಜಿಲ್ಲೆಯ ವಿವಿಧೆಡೆ ಘೋಷ್ ಅಧ್ಯಯನಕ್ಕೆ ಒತ್ತುಕೊಟ್ಟು, ಹಲವಾರು ಸ್ವಯಂಸೇವಕರನ್ನು ಬೆಳೆಸಿದವರು. ಜೊತೆಗೆ ಜಿಲ್ಲೆಯ ವ್ಯವಸ್ಥಾ ಪ್ರಮುಖರಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಇಂದು ಮಧ್ಯಾಹ್ನ ಬಡಕ್ಕಿಲ ಮನೆಯಲ್ಲಿ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪಂಚವಟಿ ಲೋಕಾರ್ಪಣೆಗೆ ತುಳಸಿ ಪ್ರತಿಷ್ಠೆಯಲ್ಲಿ ಭಾಗಿಯಾಗಿದ್ದರು:

ಇತ್ತೀಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ಜಿಲ್ಲೆಯ ಕಾರ್ಯಾಲಯ ’ಪಂಚವಟಿ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಪತ್ನಿ ಸಮೇತ ಭಾಗವಹಿಸಿದ್ದರು. ಪಂಚವಟಿಯ ತುಳಸಿ ಪ್ರತಿಷ್ಠೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here