ವಿಟ್ಲ:  ಜವುಳಿ ಉದ್ಯಮಿ ಜೋಸೆಫ್ ಎಡ್ರಿನ್ ಪಿಂಟೊ ನಿಧನ

0

ವಿಟ್ಲ: ವಿಟ್ಲದ ಹಿರಿಯ ಜವುಳಿ ಉದ್ಯಮಿಯಾಗಿದ್ದ ಬೊಬ್ಬೆಕೇರಿ ವಿದ್ಯಾನಗರ ನಿವಾಸಿ ಜೋಸೆಫ್ ಎಡ್ರಿನ್ ಪಿಂಟೊ(82ವ) ರವರು ನಿಧನರಾದರು.
ಕಳೆದ 60 ವರ್ಷದಿಂದ ವಿಟ್ಲದ ನಾಲ್ಕು ಮಾರ್ಗದ ಸಮೀಪ ಜವುಳಿ ಅಂಗಡಿ ನಡೆಸುತ್ತಿದ್ದರು.   ಖ್ಯಾತ ಜವುಳಿ ಉದ್ಯಮಿಯಾಗಿದ್ದ ಅವರು ವಿಟ್ಲ ಶೋಕಮಾತೆ ಇಗರ್ಜಿಯ ಪಾಲನಾ ಸಮಿತಿಯ ಉಪಾಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವಿಟ್ಲ ಕಥೋಲಿಕ್ ಸಭಾದ ಸ್ಥಾಪಕಾಧ್ಯಕ್ಷರಾಗಿದ್ದರು.
ಮೃತರು ಪತ್ನಿ ವಲೇರಿನಾ ಪಿಂಟೊ, ಪುತ್ರರಾದ ರೋಷನ್, ರಾಜೇಶ್ , ರಾಕೇಶ್ ಪಿಂಟೊ ರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here