ಪುತ್ತೂರು: ಪುತ್ತೂರು ಸ.ಮಾ.ಹಿ.ಪ್ರಾ ಶಾಲೆಯಲ್ಲಿ ೭೪ನೇ ಗಣರಾಜ್ಯೋತ್ಸವ ಕಾರ‍್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಂಚಾಕ್ಷರಿ ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು. ಬಳಿಕ ಸಂವಿಧಾನ ಶಿಲ್ಪಿ ಡಾ| ಬಿ.ಆರ್. ಆಂಬೇಡ್ಕರ್‌ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಹಿರಿಯ ವಿದ್ಯಾರ್ಥಿ ಉಲ್ಲಾಸ್ ಪೈ ಮಾತನಾಡಿ, ನಮ್ಮ ದೇಶಕ್ಕೆ ಸಂವಿಧಾನವನ್ನು ಅರ್ಪಿಸಿದ ದಿನದ ಮಹತ್ವ ಸಂವಿಧಾನವನ್ನು ರೂಪಿಸುವಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಡಾಕ್ಟರ್ ಅಂಬೇಡ್ಕರ್ ಹಾಗೂ ರಾಜೇಂದ್ರ ಪ್ರಸಾದ್ ಅವರನ್ನು ನೆನಪಿಸುತ್ತ ನಮ್ಮ ದೇಶವು ಇಂದು ವಿಶ್ವದಾದ್ಯಂತ ಮುಂದುವರಿದ ದೇಶವಾಗಿ ಕಂಡು ಬರುತ್ತದೆ ಇದಕ್ಕೆ ಕಾರಣ ನಮ್ಮ ದೇಶದ ಪ್ರಜೆಗಳು ದೇಶಭಕ್ತರಿಂದ ಸಾಧ್ಯವಾಗಿರುತ್ತದೆ ಆದ್ದರಿಂದ ವಿದ್ಯಾರ್ಥಿಗಳೇ ತಾವು ಕಲಿತು ಮುಂದೆ ದೇಶಕ್ಕಾಗಿ ತಮ್ಮ ಸೇವೆಯನ್ನು ನೀಡಬೇಕಾಗಿದೆ ಹಾಗೂ ನಮ್ಮ ದೇಶದ ರಕ್ಷಣೆಯು ಪ್ರಜೆಗಳ ಕೈಯಲ್ಲಿ ಇರುತ್ತದೆ ನಾವೆಲ್ಲರೂ ಒಗ್ಗಟ್ಟಾಗಿ ದೇಶವನ್ನು ಭದ್ರವಾಗಿ ಕಟ್ಟುವಲ್ಲಿ ಹಾಗೂ ಅಭಿವೃದ್ಧಿ ದೇಶ ವಾಗಲು ತಮ್ಮಲ್ಲಿರುವ ಪ್ರತಿಭೆ, ದೇಶಭಕ್ತಿ ಕಾರ್ಯಚಟುವಟಿಕೆ ಗಳಲ್ಲಿ ಭಾಗಿಯಾಗಿ ಯಶಸ್ವಿಯಾಗಬೇಕಾಗಿ ಹಾಗೂ ದೇಶದ ಪುರಸ್ಕಾರಕ್ಕೆ ಪಾತ್ರರಾಗಿ ಎಂದು ತಿಳಿಸುತ್ತಾ ವಿಧ್ಯಾರ್ಥಿಗಳಿಗೆ ಶುಭಾಶಯ ಸಲ್ಲಿಸಿದರು.
ಅಸಹಾಯಕ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನ ರೈ, ಸಹಶಿಕ್ಷಕಿ ವೀರಾ ಡಿ’ಮೆಲ್ಲೋ ಸಂವಿಧಾನದ ಬಗ್ಗೆ ಹಿತನುಡಿಗಳನ್ನಾಡಿದರು. ಸಹಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆ, ಅಡುಗೆ ಸಿಬ್ಬಂದಿ, ಪೋಷಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯಶಿಕ್ಷಕಿ ಯಶೋಧಾ ಸ್ವಾಗತಿಸಿ, ಸಹಶಿಕ್ಷಕಿ ರಾಜೇಶ್ವರಿ ವಂದಿಸಿದರು.