ರಾಮಕುಂಜ ಗ್ರಾ.ಪಂ.ಮಾಜಿ ಉಪಾಧ್ಯಕ್ಷೆ ಜಯಂತಿ ನಾಯ್ಕ್ ಹೃದಯಾಘಾತದಿಂದ ನಿಧನ

0

ರಾಮಕುಂಜ: ಕಡಬ ತಾಲೂಕಿನ ರಾಮಕುಂಜ ಗ್ರಾ,ಪಂ.ಮಾಜಿ ಉಪಾಧ್ಯಕ್ಷೆ , ಹಳೆನೇರೆಂಕಿ ಗ್ರಾಮದ ಪಾದೆನಾರು ನಿವಾಸಿ ಶಿವಪ್ಪ ನಾಯ್ಕ್‌ರವರ ಪತ್ನಿ ಜಯಂತಿ ನಾಯ್ಕ್(65ವ.)ರವರು ಹೃದಯಾಘಾತದಿಂದ ಜ.26ರಂದು ಬೆಳಿಗ್ಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿ ನಾಯ್ಕ್‌ರವರನ್ನು ಚಿಕಿತ್ಸೆಗಾಗಿ ಪುತ್ತೂರಿನ ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತುಸು ಚೇತರಿಸಿಕೊಂಡಿದ್ದ ಅವರು ಜ.26ರಂದು ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎಂದು ವರದಿಯಾಗಿದೆ. ಜಯಂತಿ ನಾಯ್ಕ್‌ರವರು ಮೂರು ಸಲ ರಾಮಕುಂಜ ಗ್ರಾ.ಪಂ.ಸದಸ್ಯೆಯಾಗಿ ಚುನಾಯಿತರಾಗಿದ್ದರು. ಈ ಪೈಕಿ ಎರಡೂವರೇ ವರ್ಷ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತಿ ಶಿವಪ್ಪ ನಾಯ್ಕ್, ಪುತ್ರಿಯರಾದ ಚಂದ್ರಕಲಾ, ವನಿತಾ ಹಾಗೂ ವಸಂತಿ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ರಾಮಕುಂಜ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಎನ್.ಕೆ., ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ. ಪಿಡಿಒ ಜೆರಾಲ್ಡ್ ಮಸ್ಕರೇನಸ್, ಗ್ರಾ.ಪಂ.ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here