ನಾಳೆ (ಜ.28ಕ್ಕೆ): ಪುರುಷರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆ ಮುಂಭಾಗದಲ್ಲಿ ಸಾರ್ವಜನಿಕ ಶ್ರೀ ದುರ್ಗಾಪೂಜೆ

0

ಪುತ್ತೂರು: ಪುರುಷರಕಟ್ಟೆ ಶಿವಾಜಿ ಶಾಖೆಯಲ್ಲಿ ಹಿಂದು ಜಾಗರಣ ವೇದಿಕೆಯಿಂದ ಸಾರ್ವಜನಿಕ ಶ್ರೀ ದುರ್ಗಾಪೂಜೆಯು  ಪುರುಷಕರಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವರ ಕಟ್ಟೆಯ ಮುಂಭಾಗದಲ್ಲಿ ಜ.28ರಂದು ಜರುಗಲಿದೆ.

ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಮಿತಿ ಸದಸ್ಯ ಉಲ್ಲಾಸ್ ಕೆ.ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ನಿವೃತ್ತ ಉಪತಹಶೀಲ್ದಾರ್ ಮೋನಪ್ಪ ಪುರುಷ ಮುಗೇರಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ನ್ಯಾಯ ಜಾಗರಣ ಸಂಯೋಜಕ್ ರಾಜೇಶ್ ಬೊಳ್ಳುಕಲ್ಲು, ಹಿಂದು ಜಾಗರಣ ವೇದಿಕೆ ಸಂಪರ್ಕ ಪ್ರಮುಖ್ ಪ್ರಜ್ವಲ್ ಈಶ್ವರಮಂಗಲ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದಲ್ಲಿ ಯೋಧರಿಗೆ ಮತ್ತು ನಾಟಿ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

LEAVE A REPLY

Please enter your comment!
Please enter your name here